ಸಪ್ತಸಾಗರದಾಚೆ ಎಲ್ಲೊ ಶೂಟಿಂಗ್ ಮುಗಿಸಿದ ರಕ್ಷಿತ್ ಶೆಟ್ಟಿ

ಮಂಗಳವಾರ, 21 ಮಾರ್ಚ್ 2023 (08:20 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕರಾಗಿರುವ ಸಪ್ತ ಸಾಗರದಾಚೆ ಎಲ್ಲೊ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ.

777 ಚಾರ್ಲಿ ಸಿನಿಮಾ ಸಕ್ಸಸ್ ಬಳಿಕ ರಕ್ಷಿತ್ ಅಭಿನಯಿಸಿರುವ ಸಿನಿಮಾ ಇದಾಗಿದೆ. ಲವ್ ಸ್ಟೋರಿ ಕಥಾ ಹಂದರದಲ್ಲಿ ರಕ್ಷಿತ್ ನಟಿಸಿದ್ದಾರೆ. ರಕ್ಷಿತ್ ಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ.

137 ದಿನಗಳ ಸೊಗಸಾದ ಚಿತ್ರೀಕರಣಕ್ಕೆ ಪೂರ್ಣವಿರಾಮ. ಸದ್ಯದಲ್ಲೇ ಥಿಯೇಟರ್ ಗೆ ಬರಲಿದೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಿನಿಮಾ ವೀಕ್ಷಿಸಬಹುದು ಎಂದು ರಕ್ಷಿತ್ ಹೇಳಿದ್ದಾರೆ. ಹೇಮಂತ್ ರಾವ್ ಸಿನಿಮಾದ ನಿರ್ದೇಶಕರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ