ಕಬ್ಜ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ರಿವ್ಯೂ ಹೇಗಿದೆ?

ಶುಕ್ರವಾರ, 17 ಮಾರ್ಚ್ 2023 (09:30 IST)
Photo Courtesy: Twitter
ಬೆಂಗಳೂರು: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಇಂದು ಭರ್ಜರಿಯಾಗಿ ತೆರೆ ಕಂಡಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಏನಂತಾರೆ ನೋಡೋಣ.

ಉಪೇಂದ್ರ ನಾಯಕರಾಗಿರುವ ಕಬ್ಜ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು, ಚಿತ್ರದ ಕತೆ, ಉಪೇಂದ್ರ ನಟನೆ, ಆಕ್ಷನ್ ಸೀಕ್ವೆನ್ಸ್ ಜೊತೆಗೆ ತಕ್ಕ ಹಿನ್ನಲೆ ಸಂಗೀತಕ್ಕೆ ಕ್ಲೀನ್ ಬೌಲ್ಡ್ ಆಗಿದ್ದಾರೆ.

ಈ ಸಿನಿಮಾದಲ್ಲಿ ತಾಂತ್ರಿಕ ಶ್ರೀಮಂತಿಕೆಯಿದೆ. ಚಂದ್ರು ಕಂಡ ಕನಸುಗಳನ್ನು ಉಪೇಂದ್ರ ಅಭಿನಯದ ಮೂಲಕ ಸಾಕಾರಗೊಳಿಸಿದ್ದಾರೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಭಾರ್ಗವ್ ‍ಭಕ್ಷಿಯಾಗಿ ಎಂಟ್ರಿ ಕೊಡುವ ಕಿಚ್ಚ ಸುದೀಪ್ ಚಿತ್ರಕ್ಕೊಂದು ಒಳ್ಳೆ ಟ್ವಿಸ್ಟ್ ಕೊಡುತ್ತಾರೆ.

ಇನ್ನು ಕೆಲವರು ಈ ಸಿನಿಮಾ ನೋಡಿದವರು ಕೆಜಿಎಫ್ ನೋಡಿದ ಹಾಗಾಗುತ್ತದೆ ಎಂದಿದ್ದಾರೆ. ಕೆಜಿಎಫ್ ನೋಡಿದ ಮೇಲೆ ಈ ಸಿನಿಮಾ ನೋಡಬೇಕೇನಿಲ್ಲ ಎಂದು ನೆಗೆಟಿವ್ ರಿವ್ಯೂ ಕೊಟ್ಟವರೂ ಇದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ