ಮುತ್ತಪ್ಪ ರೈ ಪಾತ್ರ ಮಾಡಲಿದ್ದಾರಾ ರಕ್ಷಿತ್ ಶೆಟ್ಟಿ?!

ಶುಕ್ರವಾರ, 22 ಮೇ 2020 (09:41 IST)
ಬೆಂಗಳೂರು: ಮಾಜಿ ಭೂಗತ ದೊರೆ, ಮೊನ್ನೆಯಷ್ಟೇ ನಿಧನರಾದ ಮುತ್ತಪ್ಪ ರೈ ಜೀವನಗಾಥೆ ಬಗ್ಗೆ ಸಿನಿಮಾ ಬರಲಿದ್ದು, ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮಾಜಿ ಡಾನ್ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.


ಒಂದು ಕಾಲದಲ್ಲಿ ಭೂಗತ ಲೋಕವನ್ನು ನಡುಗಿಸಿದ್ದ ಮುತ್ತಪ್ಪ ರೈ ಬಳಿಕ ಮನಃಪರಿವರ್ತನೆಯಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರ ವರ್ಣರಂಜಿತ ಬದುಕಿನ ಬಗ್ಗೆ ಸಿನಿಮಾ ಮಾಡುವ ಬಗ್ಗೆ ಅವರು ಬದುಕಿದ್ದಾಗಲೇ ಪ್ರಯತ್ನ ನಡೆದಿತ್ತು.

ಆದರೆ ಅದು ಆಗಿರಲಿಲ್ಲ. ಈಗ ಮತ್ತೆ ಅವರ ಜೀವನಗಾಥೆ ಸಿನಿಮಾ ಮಾಡುವ ಬಗ್ಗೆ ಮಾತುಕತೆಯಾಗುತ್ತಿದೆ. ಈ ನಡುವೆ ರಕ್ಷಿತ್ ಶೆಟ್ಟಿ ಈ ಸಿನಿಮಾದ ಸ್ಕ್ರಿಪ್ಟ್ ಒಪ್ಪಿಗೆಯಾದರೆ ನಟಿಸಲು ಸಿದ್ಧ ಎಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ