ರಾಣಾ ಜತೆ ರಕ್ಷಿತಾ ಪ್ರೇಮ್, ರಚಿತಾ ರಾಮ್ ‘ಎಣ್ಣೆ ಪಾರ್ಟಿ’!

ಭಾನುವಾರ, 9 ಫೆಬ್ರವರಿ 2020 (09:17 IST)
ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ, ರಕ್ಷಿತಾ ಪ್ರೇಮ್ ನಿರ್ಮಾಣದ ‘ಏಕ್ ಲವ್ ಯಾ’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.


ಈ ಸಿನಿಮಾ ರಕ್ಷಿತಾ ಸಹೋದರ ರಾಣಾಗೆ ಮೊದಲ ಸಿನಿಮಾ. ಹೀಗಾಗಿ ಸಹೋದರನ ಸಿನಿ ಜರ್ನಿಗೆ ಕಿಕ್ ಕೊಡಲು ರಕ್ಷಿತಾ, ನಟಿ ರಚಿತಾ ರಾಮ್ ಜತೆಗೆ ಹಾಡೊಂದರಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.

ಈ ಹಾಡಿನ ದೃಶ್ಯವೇ ಮೋಷನ್ ಪೋಸ್ಟರ್ ನಲ್ಲಿ ತೋರಿಸಲಾಗಿದೆ. ಈ ಪೋಸ್ಟರ್ ನಲ್ಲಿ ರಾಣಾ, ರಕ್ಷಿತಾ ಮತ್ತು ರಚಿತಾ ಬಿಯರ್ ಬಾಟಲ್ ಹಿಡಿದು ಹೆಜ್ಜೆ ಹಾಕುವ ದೃಶ್ಯವಿದೆ. ಇದೊಂದು ಕಿಕ್ ಕೊಡುವ ಹಾಡು ಎಂಬುದು ಫೋಟೋದಿಂದಲೇ ಗೊತ್ತಾಗುತ್ತಿದೆ. ಆದರೆ ಇವರು ಮೂವರ ಈ ಪೋಸ್ ಮಾತ್ರ ಫುಲ್ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ