ಅಮೆರಿಕಾದಲ್ಲಿ ಅಯ್ಯಪ್ಪ ಮಾಲೆ ಬಿಟ್ಟು ಸೂಟು ಬೂಟು ಧರಿಸಿದ ರಾಮ್ ಚರಣ್ ತೇಜ
ಕಳೆದ ಕೆಲವು ದಿನಗಳ ಹಿಂದೆ ಅಯ್ಯಪ್ಪ ವ್ರತ ಕೈಗೊಂಡಿದ್ದ ರಾಮ್ ಚರಣ್ ಅಮೆರಿಕಾಗೂ ಬರಿಗಾಲಲ್ಲಿ ತೆರಳಿದ್ದರು. ಅವರ ಅಯ್ಯಪ್ಪ ಭಕ್ತಿಯನ್ನು ನೆಟ್ಟಿಗರು ಕೊಂಡಾಡಿದ್ದರು.
ಆದರೆ ಅಮೆರಿಕಾಗೆ ತಲುಪಿದೊಡನೆ ರಾಮ್ ಚರಣ್ ಉಡುಪು ಬದಲಾಗಿದೆ. ಶೋ ಒಂದರಲ್ಲಿ ಪಾಲ್ಗೊಂಡಿದ್ದ ರಾಮ್ ಚರಣ್ ಎಂದಿನಂತೆ ಸೂಟು ಬೂಟಿನಲ್ಲಿ ಕಂಗೊಳಿಸಿದ್ದಾರೆ. ಇದರಿಂದ ಹಲವರು ಅಮೆರಿಕಾ ತಲುಪಿದೊಡನೆ ಅಯ್ಯಪ್ಪ ವ್ರತ ಮರೆತು ಹೋಯಿತಾ ಎಂದು ಪ್ರಶ್ನೆ ಮಾಡಿದ್ದರು.
ಅಸಲಿಗೆ ರಾಮ್ ಚರಣ್ ತೇಜ 21 ದಿನಗಳ ವ್ರತ ಕೈಗೊಂಡಿದ್ದರಂತೆ. ಅಮೆರಿಕಾದಲ್ಲಿ ಅಯ್ಯಪ್ಪನ ಸನ್ನಿಧಿಯೊಂದರಲ್ಲಿ ಮಾಲೆ ತೆಗೆದಿದ್ದಾರೆ. ಹೀಗಾಗಿ ಈಗ ಮಾಮೂಲಿನಂತೆ ಸೂಟು ಬೂಟು ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.