ಹೆಣ್ಣು ಮಗುವಿಗೆ ತಂದೆಯಾದ ರಾಮ್ ಚರಣ್ ತೇಜ
ರಾಮ್ ಚರಣ್ ದಂಪತಿಗೆ ಇದು ಮೊದಲ ಮಗು. ಅದರಲ್ಲೂ ಹೆಣ್ಣು ಮಗುವಾಗಿರುವುದರ ಸಂತಸದಲ್ಲಿ ಚಿರಂಜೀವಿ ಕುಟುಂಬವಿದೆ. ಸುದ್ದಿ ತಿಳಿಯುತ್ತಿದ್ದಂತೇ ಮೆಗಾಸ್ಟಾರ್ ಚಿರಂಜೀವಿ ಆಸ್ಪತ್ರೆಗೆ ಆಗಮಿಸಿದ್ದಾರೆ.
ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಡೆಲಿವರಿಯಾಗಿದೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿರುವುದಾಗಿ ಆಸ್ಪತ್ರೆ ಮೂಲಗಳು ಪತ್ರಿಕಾ ಪ್ರಕಟಣೆ ನೀಡಿದೆ.