ಇನ್ ಸ್ಟಾಗ್ರಾಂ ಪೋಸ್ಟ್ ಗೆ ರಶ್ಮಿಕಾ ಮಂದಣ್ಣ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಇತ್ತೀಚೆಗೆ ಸೆಲೆಬ್ರಿಟಿಗಳು ಇನ್ ಸ್ಟಾಗ್ರಾಂ ಪೋಸ್ಟ್ ಮೂಲಕವೂ ಭಾರೀ ಪ್ರಮಾಣದಲ್ಲಿ ಆದಾಯ ಗಳಿಸುತ್ತಿದ್ದಾರೆ. ರಶ್ಮಿಕಾ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅನೇಕ ಪ್ರಮೋಷನಲ್ ಪೋಸ್ಟ್ ಗಳನ್ನು ಪ್ರಕಟಿಸುತ್ತಿರುತ್ತಾರೆ.
ಹಾಗಿದ್ದರೆ ರಶ್ಮಿಕಾ ಪ್ರತೀ ಪ್ರಮೋಷನಲ್ ಪೋಸ್ಟ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ಮೂಲಗಳ ಪ್ರಕಾರ ರಶ್ಮಿಕಾ ಇಂತಹ ಪ್ರತೀ ಪೋಸ್ಟ್ ಗೆ ಸುಮಾರು 35 ಲಕ್ಷ ರೂ. ಚಾರ್ಜ್ ಮಾಡುತ್ತಾರೆ. ಪ್ರತೀ ಸಿನಿಮಾಗೆ ರಶ್ಮಿಕಾ ಸುಮಾರು 4 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅನೇಕ ಉತ್ಪನ್ನಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಪ್ರಮೋಷನಲ್ ಪೋಸ್ಟ್ ಗಳನ್ನು ಪ್ರಕಟಿಸುವ ಮೂಲಕ ಭಾರೀ ಗಳಿಕೆ ಮಾಡುತ್ತಿದ್ದಾರೆ.