‘100’ ಸಿನಿಮಾ ಥಿಯೇಟರ್ ಗಳಿಗೆ ರಮೇಶ್ ಅರವಿಂದ್ ಭೇಟಿ

ಗುರುವಾರ, 18 ನವೆಂಬರ್ 2021 (11:21 IST)
ಬೆಂಗಳೂರು: ನವಂಬರ್ 19 ರಿಂದ ‘100’ ಸಿನಿಮಾ ಬಿಡುಗಡೆಯಾಗುತ್ತಿರುವ ಖುಷಿಯಲ್ಲಿರುವ ನಟ ರಮೇಶ್ ಅರವಿಂದ್ ಸಿನಿಮಾ ಪ್ರಚಾರಕ್ಕೆ ಥಿಯೇಟರ್ ಗಳಿಗೆ ಭೇಟಿ ಕೊಡಲಿದ್ದಾರೆ.

100 ಸಿನಿಮಾವನ್ನು ರಮೇಶ್ ನಿರ್ದೇಶಿಸಿರುವುದರ ಜೊತೆ ನಾಯಕರಾಗಿ ನಟಿಸಿದ್ದಾರೆ. ಅವರ ಜೊತೆಗೆ ರಚಿತಾ ರಾಂ, ಪೂರ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಸೈಬರ್ ಕ್ರೈಂ ಆಧಾರಿತ ಕತೆಯಿರುವ 100 ಸಿನಿಮಾ ನವಂಬರ್ 19 ರಿಂದ ಪ್ರದರ್ಶನಗೊಳ್ಳಲಿದ್ದು, ಬೆಂಗಳೂರಿನ ಪ್ರತೀ ಥಿಯೇಟರ್ ಗಳಿಗೂ ಚಿತ್ರತಂಡದೊಂದಿಗೆ ಭೇಟಿ ಕೊಟ್ಟು ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸುವುದಾಗಿ ರಮೇಶ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ