ರಮೇಶ್ ಅರವಿಂದ್ ಇನ್ನು ಕನ್ನಡದ ಕೋಟ್ಯಾಧಿಪತಿ
ಇದುವರೆಗೆ ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮದ ನಿರೂಪಕರಾಗಿದ್ದರು. ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಭಾರೀ ಜನಪ್ರಿಯವಾಗಿತ್ತು. ಆದರೆ ಎರಡು-ಮೂರು ವರ್ಷಗಳಿಂದ ಕಾರ್ಯಕ್ರಮ ಸ್ಥಗಿತಗೊಂಡಿತ್ತು.
ಇದೀಗ ಮತ್ತೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ಸಿಗಲಿದ್ದು, ಈ ಬಾರಿ ಪುನೀತ್ ಬದಲಿಗೆ ಸ್ಪುರದ್ರೂಪಿ ನಟ, ಮಾತಿನ ಮಲ್ಲ ರಮೇಶ್ ಅರವಿಂದ್ ಕಾರ್ಯಕ್ರಮ ನಿರೂಪಿಸಲಿರುವ ಸುದ್ದಿ ಬಂದಿದೆ. ಈಗಾಗಲೇ ಇದರ ಪ್ರೋಮೋ ಶೂಟ್ ಕೂಡಾ ನಡೆದಿದೆ ಎನ್ನಲಾಗಿದ್ದು, ಸದ್ಯದಲ್ಲೇ ಕಾರ್ಯಕ್ರಮ ಆರಂಭವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.