ಅಗ್ನಿಸಾಕ್ಷಿ ಸನ್ನಿಧಿ ಕಡೆಯಿಂದ ಮತ್ತೊಂದು ಹೊಸ ಸುದ್ದಿ!

ಬುಧವಾರ, 20 ಡಿಸೆಂಬರ್ 2017 (08:33 IST)
ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುವ ಅಗ್ನಿಸಾಕ್ಷಿ ಧಾರವಾಹಿಯ ಸನ್ನಿಧಿ ಪಾತ್ರಧಾರಿ ವೈಷ್ಣವಿ ಇನ್ನು ಮುಂದೆ ಸ್ಟಾರ್ ಸುವರ್ಣದಲ್ಲಿ ಮಿಂಚಲಿದ್ದಾರೆ.
 

ಈಗಾಗಲೇ ಇದೇ ಧಾರವಾಹಿಯ ನಾಯಕ ಪಾತ್ರಧಾರಿ ಸಿದ್ಧಾರ್ಥ್ ಕಲರ್ಸ್ ವಾಹಿನಿಯ ಕಾಮಿಡಿ ಟಾಕೀಸ್ ಶೋನ ನಿರೂಪಕರಾಗಿದ್ದಾರೆ. ಇದೀಗ ನಾಯಕಿ ಸನ್ನಿಧಿ ಸರದಿ. ಸನ್ನಿಧಿ ಕೂಡಾ ಕಾಮಿಡಿ ಶೋ ಒಂದಕ್ಕೆ ನಿರೂಪಕಿಯಾಗಲಿದ್ದಾರೆ.

ಆದರೆ ಸನ್ನಿಧಿ ಅಲಿಯಾಸ್ ವೈಷ್ಣವಿ ನಿರೂಪಕಿಯಾಗುತ್ತಿರುವುದು ಸ್ಟಾರ್ ಸುವರ್ಣ ಚಾನೆಲ್ ನ ಭರ್ಜರಿ ಕಾಮಿಡಿ ಶೋಗೆ. ಈ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದ್ದು, ಸನ್ನಿಧಿ ಹೊಸ ಲುಕ್ ಭಾರೀ ಸದ್ದು ಮಾಡುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ