ದರ್ಶನ್ ಆಂಡ್ ಗ್ಯಾಂಗ್ ಗೆ ಇಂದೂ ಇಲ್ಲ ಈ ಒಂದು ಭಾಗ್ಯ

Krishnaveni K

ಶನಿವಾರ, 16 ಆಗಸ್ಟ್ 2025 (08:49 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಮತ್ತೆ ಜೈಲು ಪಾಲಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್ ಗೆ ಇಂದೂ ಈ ಒಂದು ಭಾಗ್ಯವಿಲ್ಲ. ಅದೇನೆಂದು ಇಲ್ಲಿ ನೋಡಿ.

ಮೊನ್ನೆಯಷ್ಟೇ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಮುಖ 7 ಆರೋಪಿಗಳ ಬೇಲ್ ರದ್ದುಗೊಳಿಸಿದ ಮೇಲೆ ಪೊಲೀಸರು ಬಂಧಿಸಿದ್ದರು. ಬಳಿಕ ಎಲ್ಲರನ್ನೂ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲು ನ್ಯಾಯಾಧೀಶರು ಆದೇಶ ನೀಡಿದ್ದರು. ಅದರಂತೆ ಈಗ ಎಲ್ಲಾ ಆರೋಪಿಗಳೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ನಿನ್ನೆಯೇ ಕುಟುಂಬಸ್ಥರನ್ನು ನೋಡಬಹುದು ಎಂದು ಅಂದುಕೊಂಡಿದ್ದ ಆರೋಪಿಗಳಿಗೆ ನಿರಾಸೆಯಾಗಿದೆ. ನಿನ್ನೆ ಸ್ವಾತಂತ್ರ್ಯೋತ್ಸವದ ನಿಮಿತ್ತ ಸರ್ಕಾರ ರಜೆಯಿದ್ದಿದ್ದರಿಂದ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡಲಾಗಿಲ್ಲ. ಇದೀಗ ಇಂದು ನಾಳೆ, ವೀಕೆಂಡ್ ಆಗಿದ್ದು, ಮತ್ತೆ ಆರೋಪಿಗಳ ಕುಟುಂಬಸ್ಥರ ಭೇಟಿಗೆ ಅವಕಾಶ ಸಿಗಲ್ಲ.

ಸೋಮವಾರವಷ್ಟೇ ಎಲ್ಲಾ ಆರೋಪಿಗಳ ಕುಟುಂಬಸ್ಥರು ಭೇಟಿಯಾಗಬಹುದು ಎನ್ನಲಾಗುತ್ತಿದೆ. ಸೋಮವಾರ ದರ್ಶನ್ ಪತ್ನಿ ವಿಜಯಯಲಕ್ಷ್ಮಿ, ಪವಿತ್ರಾ ಗೌಡ ತಾಯಿ ಸೇರಿದಂತೆ ಕುಟುಂಬಸ್ಥರು ಜೈಲಿಗೆ ಭೇಟಿ ನೀಡುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ