ಹಾಸ್ಟೆಲ್ ಹುಡುಗರ ಮೇಲೆ ರಮ್ಯಾ ಹಾಕಿದ್ದ ತಡೆ ಅರ್ಜಿ ವಜಾ
ಚಿತ್ರದಲ್ಲಿ ರಮ್ಯಾ ಅತಿಥಿ ಪಾತ್ರ ಮಾಡಿದ್ದಾರೆ. ಟ್ರೈಲರ್ ನಲ್ಲಿ ಈ ದೃಶ್ಯಗಳನ್ನು ಬಳಸಿಕೊಂಡಿರುವುದರ ವಿರುದ್ಧ ರಮ್ಯಾ 1 ಕೋಟಿ ರೂ. ಪರಿಹಾರ ನೀಡುವಂತೆ ಲೀಗಲ್ ನೋಟಿಸ್ ನೀಡಿದ್ದರು. ಈ ಬಗ್ಗೆ ಇಂದು ವಿಚಾರಣೆ ನಡೆದಿದೆ.
ಅದರಂತೆ ಕೋರ್ಟ್ ರಮ್ಯಾ ಅರ್ಜಿಯನ್ನು ತಳ್ಳಿ ಹಾಕಿದ್ದು, ಚಿತ್ರ ಬಿಡುಗಡೆಗೆ ಇದ್ದ ಸಂಕಷ್ಟ ದೂರವಾಗಿದೆ. ನಾಳೆಯಿಂದ ಥಿಯೇಟರ್ ನಲ್ಲಿ ಹಾಸ್ಟೆಲ್ ಹುಡುಗರು ನಿರಾತಂಕವಾಗಿ ಪ್ರದರ್ಶನವಾಗಲಿದೆ.