ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ತಾನು ಯಾಕೆ ನಟಿಸಲಿಲ್ಲ ಎಂದು ಕಾರಣ ವಿವರಿಸಿದ ರಮ್ಯಾ

ಬುಧವಾರ, 15 ನವೆಂಬರ್ 2023 (08:30 IST)
ಬೆಂಗಳೂರು: ನಟಿ ರಮ್ಯಾ ನಿರ್ಮಾಪಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಈ ಸಿನಿಮಾವನ್ನು ರಾಜ್ ಬಿ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದಾರೆ. ಮೊದಲು ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಗೆ ರಮ್ಯಾ ನಾಯಕಿ ಎಂದು ಘೋಷಣೆಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ರಮ್ಯಾ ಪಾತ್ರದಿಂದ ಹಿಂದೆ ಸರಿದರು. ಇದಕ್ಕೆ ಕಾರಣವೇನೆಂದು ಅವರೀಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಕತೆ ಹೇಳಿದಾಗ ಭಾವುಕಳಾದೆ. ಕತೆಯಲ್ಲಿನ ಡೀಟೈಲಿಂಗ್ ಹಿಡಿಸಿತು. ಹೀಗಾಗಿ ನಾಯಕಿ ಪಾತ್ರದಲ್ಲಿ ನಾನೇ ಮಾಡೋಣ ಎಂದುಕೊಂಡೆ. ಆದರೆ ಸಿನಿಮಾ ಪ್ರಾರಂಭವಾಗುವಾಗ ಇದನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವುದು ಎಂದಾಯ್ತು. ನಾನು ಕಮ್ ಬ್ಯಾಕ್ ಮಾಡುವಾಗ ಚಿತ್ರಮಂದಿರದ ಮೂಲಕವೇ ಸಿನಿಮಾ ಬಿಡುಗಡೆಯಾಗಬೇಕು ಎಂಬ ಕಾರಣಕ್ಕೆ ಈ ಸಿನಿಮಾದಿಂದ ಹಿಂದೆ ಸರಿದೆ’ ಎಂದಿದ್ದಾರೆ ರಮ್ಯಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ