ರಕ್ಷಿತಾಗೆ ರಮ್ಯಾ ಬರೆದ ಪ್ರೀತಿಯ ಪತ್ರ ವೈರಲ್

ಬುಧವಾರ, 21 ಏಪ್ರಿಲ್ 2021 (09:40 IST)
ಬೆಂಗಳೂರು: ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ನಂ.1 ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದ ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ರಮ್ಯಾ ಈಗ ಪಕ್ಕಾ ದೋಸ್ತುಗಳು.


ಮೊನ್ನೆಯಷ್ಟೇ ರಕ್ಷಿತಾ ಬರ್ತ್ ಡೇಗೆ ರಮ್ಯಾ ತಮ್ಮಿಬ್ಬರ ಹಳೆಯ ಫೋಟೋವೊಂದನ್ನು ಪ್ರಕಟಿಸಿ ನೀನಿಲ್ಲದೇ ನನ್ನ ಸಿನಿ ಜೀವನ ಸಂಪೂರ್ಣವಾಗದು ಎಂದು ಬರೆದುಕೊಂಡು ಶುಭ ಕೋರಿದ್ದರು. ಇದು ಇಷ್ಟಕ್ಕೇ ನಿಂತಿಲ್ಲ.

ಸ್ವತಃ ರಕ್ಷಿತಾಗೆ ತಮ್ಮ ಕೈಯಾರೆ ಬರೆದ ಗ್ರೀಟಿಂಗ್ಸ್ ಕಳುಹಿಸಿರುವ ರಮ್ಯಾ ಶುಭ ಕೋರಿದ್ದಾರೆ. ಅಷ್ಟೇ ಅಲ್ಲದೆ, ಸೀರೆ ಗಿಫ್ಟ್ ಮಾಡಿದ್ದಾರೆ. ಇದನ್ನು ರಕ್ಷಿತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಹೌದು, ನೀನಿಲ್ಲದೇ ನನ್ನ ವೃತ್ತಿ ಜೀವನವೂ ಪರಿಪೂರ್ಣವಾಗದು ಎಂದು ಬರೆದುಕೊಂಡಿದ್ದಲ್ಲದೆ, ಪತ್ರ ಬರೆದು ಮತ್ತೊಮ್ಮೆ ಶುಭ ಕೋರಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ