ಅನುಷ್ಕಾಗೆ ಉಡುಗೊರೆ ನೀಡಿದ ರಾಣಾ ದಗ್ಗುಬಾಟಿ

ಭಾನುವಾರ, 28 ಮಾರ್ಚ್ 2021 (09:37 IST)
ಹೈದರಾಬಾದ್ : ನಟಿ ಅನುಷ್ಕಾ ಶೆಟ್ಟಿ ಮತ್ತು ನಟ ರಾಣಾ ದಗ್ಗುಬಾಟಿ ಅವರು ಹಲವಾರು ವರ್ಷಗಳಿಂದ ಉತ್ತಮ ಸ್ನೇಹಿತರಾಗಿದ್ದಾರೆ. ಇದೀಗ ನಟ ರಾಣಾ ದಗ್ಗುಬಾಟಿ ಅವರು ನಟಿ ಅನುಷ್ಕಾ ಅವರಿಗೆ ಉಡುಗೊರೆಯೊಂದನ್ನು ಕಳುಹಿಸಿದ್ದಾರೆ.

ಇತ್ತೀಚೆಗೆ ರಾಣಾ ದಗ್ಗುಬಾಟಿ ಅವರ ಅಭಿನಯದ “ಅರಣ್ಯ “ ಚಿತ್ರ ಬಿಡುಗಡೆಯಾಗಿದ್ದು,  ಈ ಬಗ್ಗೆ ನಟಿ ಅನುಷ್ಕಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಮತ್ತು ರಾಣಾ ದಗ್ಗುಬಾಟಿ ನೀಡಿದ ಉಡುಗೊರೆಯ ಫೋಟೊ ಹಾಕಿ ಧನ್ಯವಾದ ಅರ್ಪಿಸಿದ್ದಾರೆ. 

ರಾಣಾ ದಗ್ಗುಬಾಟಿ ಅವರು ಅರಣ್ಯದಲ್ಲಿ ದೊರೆತ ಕೆಲವು ವಸ್ತುಗಳನ್ನು ನಟಿ ಅನುಷ್ಕಾ ಗೆ ನೀಡಿದ್ದಾರೆ ಎನ್ನಲಾಗಿದೆ. ಇವರಿಬ್ಬರು ಬಾಹುಬಲಿ ಮತ್ತು ರುದ್ರಾಮಾದೇವಿ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ