ರಾಣಾ ದಗ್ಗುಬಾಟಿ – ಮಿಹಿಕಾ ಬಜಾಜ್ ಮನೆಯಲ್ಲಿ ಸತ್ಯನಾರಾಯಣ ಪೂಜೆ

ಸೋಮವಾರ, 10 ಆಗಸ್ಟ್ 2020 (21:52 IST)
ನಟ ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್ ತಮ್ಮ ಆಪ್ತ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹ ಆಗಿದ್ದಾರೆ.


ತಮ್ಮ ಜೀವನದಲ್ಲಿ ಹೊಸ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ವಿವಾಹ ಸಮಾರಂಭದಲ್ಲಿ ಅತಿಥಿ ಪಟ್ಟಿಯು 30 ಜನರನ್ನು ಮೀರಲಿಲ್ಲ. ಅಲ್ಲು ಅರ್ಜುನ್, ರಾಮ್ ಚರಣ್, ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ಅವರಂತಹ ಉದ್ಯಮದ ಕೆಲವರು ಮತ್ತು ರಾಣಾ ಅವರ ಆಪ್ತರು ಮತ್ತು ಕುಟುಂಬದವರು ಪಾಲ್ಗೊಂಡಿದ್ದರು.

ನಟನ ಮನೆಯಲ್ಲಿ ನವವಿವಾಹಿತರು ಸತ್ಯನಾರಾಯಣ ಪೂಜೆ ನಡೆಸುತ್ತಿರುವ ಫೋಟೋ ವೈರಲ್ ಆಗಿದೆ. 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ