ಬಾಹುಬಲಿಯಲ್ಲಿ ಬಲ್ಲಾಳದೇವನ ಪತ್ನಿ ಯಾರು? ಸೀಕ್ರೆಟ್ ಬಿಚ್ಚಿಟ್ಟ ರಾಣಾ!

ಗುರುವಾರ, 11 ಮೇ 2017 (11:04 IST)
ಹೈದರಾಬಾದ್: ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳದೇವನ ಪುತ್ರನನ್ನು ಮಹೇಂದ್ರ ಬಾಹುಬಲಿ ಕೊಲ್ಲುವ ದೃಶ್ಯವಿದೆ. ಅಸಲಿಗೆ ಆ ಸಿನಿಮಾದಲ್ಲಿ ಬಲ್ಲಾಳದೇವನ ಪತ್ನಿ ಯಾರು ಎಂಬ ಪ್ರಶ್ನೆ ವೀಕ್ಷಕರದ್ದು. ಅದರ ಬಗ್ಗೆ ರಾಣಾ ದಗ್ಗುಬತಿ ಉತ್ತರಿಸಿದ್ದಾರೆ.

 
ತನ್ನ ತಂದೆಯನ್ನು ಕೊಂದ ಬಲ್ಲಾಳದೇವನನ್ನು ಮಹೇಂದ್ರ ಬಾಹುಬಲಿ ಕೊಲ್ಲುವುದು ಎರಡನೇ ಭಾಗದ ಕತೆ. ಸಿನಿಮಾದಲ್ಲಿ ಬಾಹುಬಲಿಯ ವಂಶವೃಕ್ಷದ ಸಂಪೂರ್ಣ ಮಾಹಿತಿಯಿದೆ. ಆದರೆ ಬಲ್ಲಾಳದೇವನ ಪುತ್ರನಿಗೆ ಅಮ್ಮ ಯಾರು ಎಂಬ ಪ್ರಶ್ನೆಗೆ ಉತ್ತರವಿಲ್ಲ.

ಅಂದರೆ ಬಲ್ಲಾಳದೇವನಿಗೆ ಮದುವೆಯಾಗಿತ್ತೇ? ಆತನ ಪತ್ನಿ ಯಾರು ಎಂದು ಎಲ್ಲೂ ಉಲ್ಲೇಖವಿಲ್ಲ. ಈ ಬಗ್ಗೆ ಸ್ವತಃ ಬಲ್ಲಾಳದೇವನ ಪಾತ್ರಧಾರಿ ರಾಣಾಗೆ ಸಂದರ್ಶನವೊಂದರಲ್ಲಿ ಪ್ರಶ್ನೆ ಕೇಳಿದಾಗ ಅವರು ಆತ ದತ್ತು ಪುತ್ರ ಎಂದುಕೊಳ್ಳಿ ಎಂದು ಚಟಾಕಿ ಹಾರಿಸಿದ್ದಾರೆ. ಅಸಲಿಗೆ ಇಲ್ಲಿ ಬಲ್ಲಾಳದೇವ ಕೂಡಾ ಅಮರೇಂದ್ರ ಬಾಹುಬಲಿಯ ಪತ್ನಿ ದೇವಯಾನಿಯ ಪ್ರೇಮಿಯಾಗಿದ್ದ. ಹಾಗಾಗಿ ಆತ ಮತ್ತೆ ಮದುವೆಯಾಗಿದ್ದನೇ ಎನ್ನುವುದನ್ನು ಹೇಳಲಾಗಿಲ್ಲ.

ಹಾಗಾಗಿ ಈ ಪ್ರಶ್ನೆ ಎದ್ದಿದೆ. ಅದೇನೇ ಇದ್ದರೂ ಬಾಹುಬಲಿ ಕಲೆಕ್ಷನ್ ಗೆ ಅಡ್ಡಿಯಾಗಿಲ್ಲ. ವೀಕ್ಷಕರು ಇದರ ಬಗ್ಗೆ ತಲೆಯೇ ಕೆಡಿಸಿಕೊಂಡಿಲ್ಲ. ಈಗಾಗಲೇ  1200 ಕೋಟಿ ರೂ. ಬಾಚಿ ಮುನ್ನುಗ್ಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ