ಆನಿಮಲ್ ಸಿನಿಮಾಗೆ ರಣಬೀರ್, ರಶ್ಮಿಕಾ ಪಡೆದುಕೊಂಡ ಸಂಭಾವನೆ ಎಷ್ಟು?!

ಗುರುವಾರ, 20 ಏಪ್ರಿಲ್ 2023 (06:59 IST)
Photo Courtesy: Twitter
ಮುಂಬೈ: ರಣಬೀರ್ ಕಪೂರ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿರುವ ಆನಿಮಲ್ ಸಿನಿಮಾ ಬಾಲಿವುಡ್ ನ ಮತ್ತೊಂದು ಬಹುನಿರೀಕ್ಷೆಯ ಸಿನಿಮಾ.

ಈ ಸಿನಿಮಾ ಇದೇ ವರ್ಷ ಆಗಸ್ಟ್ ನಲ್ಲಿ ತೆರೆ ಕಾಣಲಿದೆ. ಸಿನಿಮಾದಲ್ಲಿ ರಣಬೀರ್ ಗ್ಯಾಂಗ್ ಸ್ಟರ್ ರೀತಿ ಪಕ್ಕಾ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾಗೆ ಅವರು ಪಡೆದುಕೊಂಡ ಸಂಭಾವನೆ ಬರೋಬ್ಬರಿ 70 ಕೋಟಿ! ಇನ್ನು ರಣಬೀರ್ ಗೆ ನಾಯಕಿಯಾಗಿ ಅಭಿನಯಿಸಿರುವ ರಶ್ಮಿಕಾ 4 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಅನಿಲ್ ಕಪೂರ್ ಕೂಡಾ ಮತ್ತೊಂದು ಪ್ರಮುಖ ಪಾತ್ರ ಮಾಡುತ್ತಿದ್ದು ಅವರ ಸಂಭಾವನೆ 2 ಕೋಟಿ ರೂ. ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ