ಐಪಿಎಲ್ ಆರಂಭೋತ್ಸವದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ

ಶುಕ್ರವಾರ, 31 ಮಾರ್ಚ್ 2023 (20:13 IST)
Photo Courtesy: Twitter
ಅಹಮ್ಮದಾಬಾದ್: ಐಪಿಎಲ್ 2023 ರ ಆರಂಭೋತ್ಸವ ಗುಜರಾತ್ ನ ಅಹಮ್ಮದಾಬಾದ್ ಮೈದಾನದಲ್ಲಿ ಕಳೆಗಟ್ಟಿತು. ನಟಿ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ, ಗಾಯಕ ಅರ್ಜಿತ್ ಸಿಂಗ್ ನೃತ್ಯ, ಹಾಡಿನ ಮೂಲಕ ರಂಜಿಸಿದರು.

ವೇದಿಕೆಯೇರುತ್ತಿದ್ದಂತೇ ತಮಿಳು ಮತ್ತು ಗುಜರಾತಿ ಭಾಷೆಯಲ್ಲಿ ಪ್ರೇಕ್ಷಕರನ್ನು ಮಾತನಾಡಿಸಿದ ರಶ್ಮಿಕಾ ಪ್ರೇಕ್ಷಕರಲ್ಲಿ ಹೊಸ ಉತ್ಸಾಹ ತುಂಬಿದರು. ಬಳಿಕ ರಶ್ಮಿಕಾ ತಮ್ಮದೇ ಸಿನಿಮಾದ ಸಾಮಿ ಸಾಮಿ ಹಾಡು ಹಾಗೂ ಆಸ್ಕರ್ ವಿಜೇತ ನಾಟ್ಟು ನಾಟ್ಟು ಹಾಡಿಗೆ ಹೆಜ್ಜೆ ಹಾಕಿ ಪ್ರೇಕ್ಷಕರು ಹುಚ್ಚೆದ್ದು ಕುಣಿಯುಂವತೆ ಮಾಡಿದರು.

ಇನ್ನು, ಗಾಯಕ ಅರ್ಜಿತ್ ಸಿಂಗ್ ಪಠಾಣ್ ಹಾಡಿಗೆ ಧ್ವನಿಯಾಗುತ್ತಿದ್ದಂತೇ ಪ್ರೇಕ್ಷಕರಲ್ಲಿ ಮಿಂಚಿನ ಸಂಚಾರವಾಯಿತು. ಅಂತೂ ಎರಡು ವರ್ಷಗಳ ಬಳಿಕ ಐಪಿಎಲ್ ಆರಂಭೋತ್ಸವ ಅದ್ಧೂರಿಯಾಗಿ ನೆರವೇರಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ