ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಹೊಸ ವರ್ಷಕ್ಕೆ ತಮ್ಮ ಸ್ನೇಹಿತರ ಜೊತೆ ಗೋವಾಗೆ ತೆರಳಿ ಪಾರ್ಟಿ ಮಾಡುತ್ತಿದ್ದಾರೆ.
ಕೆಲವು ದಿನಗಳ ಮಟ್ಟಿಗೆ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡು ಸ್ನೇಹಿತರ ಜೊತೆ ಹೊಸ ವರ್ಷಾಚರಣೆ ಮಾಡುತ್ತಿದ್ದಾರೆ. ಗೋವಾದಿಂದ ಲೈವ್ ಬಂದು ಮಾತನಾಡಿರುವ ರಶ್ಮಿಕಾ ತಾವು ಸಿನಿಮಾರಂಗಕ್ಕೆ ಬಂದು ನಾಲ್ಕು ವರ್ಷಗಳಾದ ಖುಷಿಯಿದೆ ಎಂದಿದ್ದಾರೆ. ಜೊತೆಗೆ ಕೊರೋನಾ ಇರುವ ಕಾರಣ ಸೇಫ್ ಆಗಿ ಹೊಸ ವರ್ಷ ಆಚರಿಸಿ ಎಂದು ಮನವಿ ಮಾಡಿದ್ದಾರೆ.