ಪೊಗರು ಡೈಲಾಗ್ ಟ್ರೈಲರ್ ಬಗ್ಗೆ ರಶ್ಮಿಕಾ ಮಂದಣ್ಣ ಬರೆದಿದ್ದು ನೋಡಿ ಅಭಿಮಾನಿಗಳಿಗೇ ಕನ್ ಫ್ಯೂಸ್!

ಶುಕ್ರವಾರ, 25 ಅಕ್ಟೋಬರ್ 2019 (09:28 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಸಿನಿಮಾದ ಡೈಲಾಗ್ ಟ್ರೈಲರ್ ನಿನ್ನೆ ಬಿಡುಗಡೆಯಾಗಿದೆ. ಆದರೆ ಡೈಲಾಗ್ ಟ್ರೈಲರ್ ಬಗ್ಗೆ ರಶ್ಮಿಕಾ ಬರೆದಿದ್ದು ನೋಡಿ ಪ್ರೇಕ್ಷಕರಿಗೆ ಕನ್ ಫ್ಯೂಸ್ ಆಗಿದೆ.


ರಶ್ಮಿಕಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಪೊಗರು ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ ಎಂದು ಬರೆದಿದ್ದರು. ಆದರೆ ಇದು ಟ್ರೈಲರ್ ಅಲ್ಲ, ಡೈಲಾಗ್ ಟ್ರೈಲರ್ ಅಷ್ಟೇ. ಹೀಗಾಗಿ ಈ ಬಗ್ಗೆ ಕಾಮೆಂಟ್ ಮಾಡಿರುವ ಕೆಲವರು ಮೇಡಂ ಇದು ಟ್ರೈಲರ್ ಅಲ್ಲ, ಡೈಲಾಗ್ ಟ್ರೈಲರ್ ಅಷ್ಟೇ ಎಂದಿದ್ದಾರೆ.

ಇನ್ನು, ಕೆಲವರು ಮತ್ತೆ ರಶ್ಮಿಕಾಗೆ ಕನ್ನಡ ವಿಚಾರವಾಗಿ ಕೆಣಕಿದ್ದಾರೆ. ಮಾತೃಭಾಷೆ ಬಿಟ್ಟವರು ಮೂರೂ ಬಿಟ್ಟವರಿಗಿಂತ ಮೂರ್ಖರು ಎಂದು ರಶ್ಮಿಕಾಗೆ ಟಾಂಗ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ