ರಶ್ಮಿಕಾ ಮಂದಣ್ಣನ ಡೈಲಾಗ್ ಗೆ ಫಿದಾ ಆದ ದೀಪಿಕಾ ಪಡುಕೋಣೆ

ಬುಧವಾರ, 22 ಸೆಪ್ಟಂಬರ್ 2021 (09:53 IST)
ಮುಂಬೈ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹೊಡೆದ ಡೈಲಾಗ್ ಒಂದು ಬಾಲಿವುಡ್ ತಾರೆ ದೀಪಿಕಾ ಪಡುಕೋಣೆಯ ಗಮನ ಸೆಳೆದಿದೆ.


ಮಾಧ‍್ಯಮ ಸಂದರ್ಶನವೊಂದರಲ್ಲಿ ರಶ್ಮಿಕಾ ‘ಓಂ ಶಾಂತಿ ಓಂ’ ಸಿನಿಮಾದ ದೀಪಿಕಾ ಪಡುಕೋಣೆಯವರ ಫೇಮಸ್ ಡೈಲಾಗ್ ‘ಏಕ್ ಚುಟ್ಕೀ ಸಿಂಧೂರ್’ ಡೈಲಾಗ್ ಹೇಳಿ ರಂಜಿಸಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ದೀಪಿಕಾ ಗಮನಕ್ಕೂ ಬಂದಿದೆ.

ರಶ್ಮಿಕಾ ಡೈಲಾಗ್ ಹೇಳಿದ ಶೈಲಿಗೆ ಖುಷಿಯಾಗಿರುವ ದೀಪಿಕಾ ‘ತುಂಬಾ ಮುದ್ದಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ರಶ್ಮಿಕಾ ಈಗ ಬಾಲಿವುಡ್ ನಲ್ಲೂ ಸಿನಿಮಾ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಡೆದ ಸಂದರ್ಶನವೊಂದರಲ್ಲಿ ಅವರು ಈ ಡೈಲಾಗ್ ಹೊಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ