ರಾಜ್ ಕುಂದ್ರಾಗೆ ಜಾಮೀನು: ಶಿಲ್ಪಾ ಶೆಟ್ಟಿ ಪ್ರತಿಕ್ರಿಯೆ ಏನು ಗೊತ್ತಾ?
ಮಂಗಳವಾರ, 21 ಸೆಪ್ಟಂಬರ್ 2021 (10:20 IST)
ಮುಂಬೈ: ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿದ್ದ ಉದ್ಯಮಿ ರಾಜ್ ಕುಂದ್ರಾಗೆ ನ್ಯಾಯಾಲಯ ಜಾಮೀನು ನೀಡಿದೆ. ಇದರ ಬಗ್ಗೆ ನಟಿ, ರಾಜ್ ಪತ್ನಿ ಶಿಲ್ಪಾ ಶೆಟ್ಟಿ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.
50000 ರೂ. ಶ್ಯೂರಿಟಿ ಬಾಂಡ್ ಜೊತೆಗೆ ಜಾಮೀನು ನೀಡಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೇ ಶಿಲ್ಪಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಒಂದು ಕೆಟ್ಟ ಬಿರುಗಾಳಿಯ ನಂತರ ಒಳ್ಳೆಯದು ಬರುತ್ತದೆ ಎಂದು ಸಾಬೀತುಪಡಿಸಲು ಕಾಮನಬಿಲ್ಲು ಇದೆ ಎಂದು ಶಿಲ್ಪಾ ಸಾಲುಗಳನ್ನು ಬರೆದುಕೊಂಡಿದ್ದಾರೆ. ಅಂತೂ ಎರಡು ತಿಂಗಳ ಬಳಿಕ ರಾಜ್ ಕುಂದ್ರಾ ಜೈಲು ವಾಸ ಅಂತ್ಯಗೊಂಡಿದೆ.