ವಿಜಯ್ ದೇವರಕೊಂಡ ಎಂದರೆ ತನಗೆಷ್ಟು ಇಷ್ಟ ಎಂದು ಹೇಳಿಕೊಂಡ ರಶ್ಮಿಕಾ ಮಂದಣ್ಣ

ಬುಧವಾರ, 30 ಜೂನ್ 2021 (10:02 IST)
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಇನ್ ಸ್ಟಾಗ್ರಾಂ ಪುಟದಲ್ಲಿ ಅಭಿಮಾನಿಗಳೊಂದಿಗೆ ನಡೆಸಿದ ಸಂವಾದದಲ್ಲಿ ವಿಜಯ್ ದೇವರಕೊಂಡ ಮೇಲಿನ ಪ್ರೀತಿ ಹಂಚಿಕೊಂಡಿದ್ದಾರೆ.


ರಶ್ಮಿಕಾಗೆ ಅಭಿಮಾನಿಯೊಬ್ಬರು ನಿಮಗೆ ವಿಜಯ್ ದೇವರಕೊಂಡ ಎಂದರೆ ಎಷ್ಟು ಇಷ್ಟ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿರುವ ರಶ್ಮಿಕಾ ತುಂಬಾ ಇಷ್ಟ ಎಂದು ಸನ್ನೆ ಮಾಡಿದ್ದಲ್ಲದೆ, ನನ್ನ ಬೆಸ್ಟ್ ಫ್ರೆಂಡ್ ಎಂದಿದ್ದಾರೆ.

ಇನ್ನು, ಇನ್ನೊಬ್ಬ ಅಭಿಮಾನಿಯ ಕೋರಿಕೆಯಂತೆ ವಿಜಯ್ ಜೊತೆಗಿನ ಫೇವರಿಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬ ರಶ್ಮಿಕಾಗೆ ನನ್ನ ಮದುವೆಯಾಗ್ತೀರಾ ಎಂದು ಕೇಳಿದ್ದಾನೆ. ಇದಕ್ಕೆ ರಶ್ಮಿಕಾ ಸರಿಯಾಗಿ ಪ್ರಪೋಸ್ ಮಾಡೋದಲ್ವಾ ಎಂದು ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ