ನಟಿ ರಶ್ಮಿಕಾ ನೋಡಲು ಬಂದ ಅಭಿಮಾನಿಗೆ ನಿರಾಸೆ: ಕಿರಿಕ್ ಬೆಡಗಿ ಹೇಳಿದ್ದೇನು?

ಸೋಮವಾರ, 28 ಜೂನ್ 2021 (13:26 IST)
ಬೆಂಗಳೂರು: ನ್ಯಾಷನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಎಂದರೆ ಯುವಕರ ಅಚ್ಚು ಮೆಚ್ಚಿನ ನಟಿ. ಇದೀಗ ತಮ್ಮ ನೆಚ್ಚಿನ ನಟಿಯನ್ನು ಭೇಟಿಯಾಗಲು ನೂರಾರು ಕಿ.ಮೀ. ದೂರದಿಂದ ಬಂದಿದ್ದ ಅಭಿಮಾನಿಯೊಬ್ಬನಿಗೆ ನಿರಾಸೆಯಾಗಿದೆ.


ರಶ್ಮಿಕಾ ನೋಡಲೆಂದೇ ಅವರ ಕೊಡಗಿನ ನಿವಾಸಕ್ಕೆ ತೆಲಂಗಾಣದಿಂದ 900 ಕಿ.ಮೀ. ದೂರದಿಂದ ಬಂದಿದ್ದ ಅಭಿಮಾನಿಯೊಬ್ಬ ಅವರನ್ನು ಕಾಣದೇ ನಿರಾಸೆಯಿಂದ ಹಿಂದಿರುಗುವಂತಾಗಿದೆ. ಈ ವೇಳೆ ರಶ್ಮಿಕಾ ಮುಂಬೈನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ನೂರಾರು ಮೈಲಿ ದೂರದಿಂದ ಬಂದಿದ್ದ ಅಭಿಮಾನಿಗೆ ತನ್ನ ನೆಚ್ಚಿನ ತಾರೆಯನ್ನು ಭೇಟಿಯಾಗಲಾಗಲಿಲ್ಲ.

ಈ ವಿಚಾರ ರಶ್ಮಿಕಾ ಗಮನಕ್ಕೂ ಬಂದಿದೆ. ಇದರ ಬಗ್ಗೆ ಟ್ವೀಟ್ ಮಾಡಿರುವ ಅವರು ‘ದಯವಿಟ್ಟು ಯಾರೂ ಹೀಗೇ ದೂರದೂರುಗಳಿಂದ ನನ್ನನ್ನು ಭೇಟಿಯಾಗಲೆಂದೇ ಬರಬೇಡಿ. ನಿಮ್ಮನ್ನು ಭೇಟಿಯಾಗದೇ ಇದ್ದಿದ್ದಕ್ಕೆ ಬೇಸರವಾಗುತ್ತಿದೆ. ಮುಂದೊಂದು ದಿನ ಖಂಡಿತಾ ಭೇಟಿಯಾಗೋಣ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ