ಆಂಧ್ರಪ್ರದೇಶ: ರೇವ್ ಪಾರ್ಟಿ ಪ್ರಕರಣ ಸಂಬಂಧ ಸುದ್ದಿಯಲ್ಲಿರುವ ನಟಿ ಹೇಮಾ ಕೊಲ್ಲ ವಿರುದ್ಧ ತೆಲುಗು ಚಿತ್ರರಂಗ ತಿರುಗಿ ಬಿದ್ದು ಅಸಮಾಧಾನ ಹೊರಹಾಕುತ್ತಿದೆ. ಅದಲ್ಲದೆ ನಟಿ ಹೇಮಾ ಅವರನ್ನು ಚಿತ್ರರಂಗದಿಂದ ನಿಷೇಧಿಸುವಂತೆ ಒತ್ತಾಯ ಕೇಳಿಬರುತ್ತಿದೆ.
ಹೇಮಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕುತ್ತಿರುವ ಹೋರಾಟಗಾರರು, ಹಿರಿಯ ನಟಿಯರು, ಪೋಷಕರ ನಟಿಯರು, ಕಲಾವಿದರು ಹೇಮಾ ಅವರನ್ನು ಚಿತ್ರರಂಗದಿಂದ ನಿಷೇಧ ಮಾಡಿ ತಕ್ಕ ಪಾಠ ಕಲಿಸುವಂತೆ ಅಭಿಪ್ರಾಯ ಹೊರ ಹಾಕುತ್ತಿದ್ದಾರೆ.
ಇನ್ನೂ ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ನಟಿ ಹೇಮಾ ಅವರು ಭಾಗಿಯಾಗಿದ್ದರು. ಹೈಡ್ರಾಮಾ ಸೃಷ್ಟಿಸಿದ ಹೇಮಾ ಅವರು ನಾನು ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿಲ್ಲ, ತಾನು ಆ ವೇಳೆ ಹೈದರಾಬಾದ್‌ನ ಫಾರಂನಲ್ಲಿ ಇದ್ದಿರುವುದಾಗಿ ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಆದರೆ ತನಿಖೆಯಲ್ಲಿ ರೇಖಾ ಅವರು ಪಾರ್ಟಿಯಲ್ಲಿ ಪಾಲ್ಗೊಂಡಿರುವುದಾಗಿ ಪೊಲೀಸರು ಸ್ಪಷ್ಟ ಪಡಿಸಿದ್ದರು
ಅದಲ್ಲದೆ ರೇಖಾ ಅವರ ರಕ್ತದ ಮಾದರಿಯಲ್ಲಿ ಅವರು ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಿರುವುದಾಗಿ ದೃಡಪಟ್ಟಿತ್ತು. ಸದ್ಯ ಪ್ರಕರಣ ಸಂಬಂಧ ಹೇಮಾ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದಿದ್ದು, ನಟಿ ಕಾಲಾವಕಾಶ ಕೋರಿದ್ದಾರೆ.