ಕ್ರ್ಯಾಕ್ ಚಿತ್ರದ ಬಳಿಕ ತಮ್ಮ ಸಂಭಾವನೆ ಹೆಚ್ಚಿಸಿಕೊಂಡ ರವಿತೇಜ
ಶುಕ್ರವಾರ, 29 ಜನವರಿ 2021 (15:58 IST)
ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟ ರವಿತೇಜ ಮತ್ತು ನಿರ್ದೇಶಕ ಗೋಪಿಚಂದ್ ಮಾಲಿನೇನಿ ಅವರ ಕ್ರ್ಯಾಕ್ ಚಿತ್ರ ಇತ್ತೀಚೆಗಷ್ಟೆ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡಿದೆ.
ಇದು ರವಿತೇಜ ಅವರ ವೃತ್ತಿ ಜೀವನದ 66ನೇ ಚಿತ್ರವಾಗಿದೆ. ಇದರಲ್ಲಿ ರವಿತೇಜ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ. ಇದೀಗ ಕ್ರ್ಯಾಕ್ ಚಿತ್ರ ಸೂಪರ್ ಹಿಟ್ ಆದ ಬಳಿಕ ರವಿತೇಜ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ.
ರವಿತೇಜ ಅವರು ಕ್ರ್ಯಾಕ್ ಚಿತ್ರದಲ್ಲಿ ನಟಿಸಲು 12ಕೋಟಿ ರೂ ಪಡೆದುಕೊಂಡಿದ್ದಾರಂತೆ. ಆದರೆ ಇದೀಗ ಅವರ ಸಂಭಾವನೆ ದರ ಬದಲಾಗಿದ್ದು, ಮುಂದಿನ ಚಿತ್ರಕ್ಕಾಗಿ 16 ಕೋಟಿನ ರೂ. ಬೇಡಿಕೆ ಇಟ್ಟಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.