ಆದಿಪುರುಷ್ ಸಿನಿಮಾ ವೀಕ್ಷಿಸಲು ಬಂದ ನಿಜ ಆಂಜನೇಯ!

ಶುಕ್ರವಾರ, 16 ಜೂನ್ 2023 (09:00 IST)
ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಆದಿಪುರುಷ್ ಸಿನಿಮಾ ಇಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಿದೆ.

ವಿಶೇಷವೆಂದರೆ ಈ ಸಿನಿಮಾ ರಾಮಾಯಣದ ಕಥಾಹಂದರ ಹೊಂದಿರುವ ಕಾರಣ ಚಿತ್ರತಂಡ ಆಂಜನೇಯ ಸ್ವಾಮಿಗೆ ಭಕ್ತಿಪೂರ್ವಕವಾಗಿ ಒಂದು ಸೀಟು ಮೀಸಲಿಟ್ಟಿದೆ.

ಆದರೆ ಆಂಧ್ರದ ಥಿಯೇಟರ್ ಒಂದರಲ್ಲಿ ನಿಜವಾಗಿಯೂ ಆಂಜನೇಯ ಸ್ವಾಮಿ ಥಿಯೇಟರ್ ಗೆ ಸಿನಿಮಾ ನೋಡಲು ಲಗ್ಗೆಯಿಟ್ಟಿದ್ದಾನೆ. ಸಿನಿಮಾ ತೆರೆ ಮೇಲೆ ಪ್ರದರ್ಶನಗೊಳ್ಳುತ್ತಿರುವ ಥಿಯೇಟರ್ ನ ಗೋಡೆ ಮೇಲೆ ಇಣುಕಿ ಹಾಕಿದ್ದಾನೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ