ಚಿತ್ರರಂಗದ ಕಾರ್ಮಿಕರಿಗೆ ರಿಯಲ್ ಸ್ಟಾರ್ ಉಪೇಂದ್ರ ನೆರವು

ಮಂಗಳವಾರ, 11 ಮೇ 2021 (09:22 IST)
ಬೆಂಗಳೂರು: ಕೊರೋನಾದಿಂದಾಗಿ ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಚಿತ್ರರಂಗದ ಕಾರ್ಮಿಕರಿಗೆ ರಿಯಲ್ ಸ್ಟಾರ್ ಉಪೇಂದ್ರ ನೆರವಾಗಲು ಮುಂದೆ ಬಂದಿದ್ದಾರೆ.


ಚಿತ್ರೀಕರಣವಿಲ್ಲದೇ ಕಾರ್ಮಿಕರಿಗೆ ಒಪ್ಪೊತ್ತಿನ ಊಟಕ್ಕೂ ತೊಂದರೆಯಾಗಿದೆ. ಹೀಗಾಗಿ ಕಾರ್ಮಿಕರಿಗೆ ದೈನಂದಿನ ದಿನಸಿ ಕಿಟ್ ನ್ನು ಕಾರ್ಮಿಕರ ಸಂಘದ ಮೂಲಕ ವಿತರಿಸಲಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಉಪೇಂದ್ರ ಅಗತ್ಯವಿದ್ದವರು ಕಾರ್ಮಿಕರ ಒಕ್ಕೂಟವನ್ನು ಸಂಪರ್ಕಿಸಿ ಎಂದಿದ್ದಾರೆ. ಅಷ್ಟೇ ಅಲ್ಲದೆ, ತಮಗೆ ದೇಣಿಗೆಯಾಗಿ ಬಂದ ಹಣವನ್ನು ಕಿರುತೆರೆ ಕಾರ್ಮಿಕರ ನೆರವಿಗೆ ಒದಗಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ