ಹರಿಕತೆ ಬಗ್ಗೆ ಹೊಸ ಸುದ್ದಿ ಕೊಡಲು ಬರ್ತಿದ್ದಾರೆ ರಿಷಬ್ ಶೆಟ್ಟಿ

ಶುಕ್ರವಾರ, 14 ಜನವರಿ 2022 (09:35 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಕ್ರಿಯಾತ್ಮಕ ಸಿನಿಮಾಗಳ ಮೂಲಕ ಜನರ ಗಮನ ಸೆಳೆಯುತ್ತಿರುವ ರಿಷಬ್ ಶೆಟ್ಟಿ ಈ ಸಂಕ್ರಾಂತಿಗೆ ಅಭಿಮಾನಿಗಳಿಗೆ ಹೊಸ ಸುದ್ದಿ ಕೊಡುತ್ತಿದ್ದಾರೆ.

ರಿಷಬ್ ಶೆಟ್ಟಿ ಅಭಿನಯಿಸುತ್ತಿರುವ ಹರಿಕತೆ ಅಲ್ಲ ಗಿರಿಕತೆ ಎಂಬ ಸಿನಿಮಾ ಲಾಕ್ ಡೌನ್ ಗೌಜಿ ಗದ್ದಲಗಳಿಗಿಂತ ಮೊದಲೇ ಘೋಷಣೆಯಾಗಿತ್ತು. ಇದೀಗ ಆ ಸಿನಿಮಾ ಬಗ್ಗೆ ಚಿತ್ರತಂಡ ಅಪ್ ಡೇಟ್ ಕೊಡುತ್ತಿದೆ.

ಇಂದು ಈ ಸಿನಿಮಾದ ಅಧಿಕೃತ ಪೋಸ್ಟರ್ ಬಿಡುಗಡೆಯಾಗಲಿದೆ. ಇಂದು ಬೆಳಿಗ್ಗೆ 11.05 ಕ್ಕೆ ಪೋಸ್ಟರ್ ಬಿಡುಗಡೆಯಾಗುತ್ತಿದೆ. ಪಕ್ಕಾ ಎಂಟರ್ ಟೈನರ್ ಸಿನಿಮಾವನ್ನು ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ