ಕಾಂತಾರ ಚಾಪ್ಟರ್ 1 ಸಿನಿಮಾ ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ: ಆ ಸೀನ್ ಇಲ್ಲೂ ಇರುತ್ತಾ

Krishnaveni K

ಸೋಮವಾರ, 22 ಸೆಪ್ಟಂಬರ್ 2025 (08:56 IST)
ಬೆಂಗಳೂರು: ಸಿನಿ ಪ್ರಿಯರು ಬಹಳ ದಿನಗಳಿಂದ ಕಾಯುತ್ತಿದ್ದ ಕಾಂತಾರ ಚಾಪ್ಟರ್ 1 ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಲಿದೆ. ಈಗ ಎಲ್ಲರಿಗೂ ಆ ಒಂದು ಸೀನ್ ಇರುತ್ತಾ ಎನ್ನುವುದೇ ಕುತೂಹಲವಾಗಿದೆ.

ಕಾಂತಾರ ಚಾಪ್ಟರ್ 1 ಅಕ್ಟೋಬರ್ 2 ಕ್ಕೆ ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇಂದು ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲಂಸ್ ಈಗಾಗಲೇ ಘೋಷಿಸಿದೆ. ಮಧ್ಯಾಹ್ನ 12.45 ಕ್ಕೆ ಚಿತ್ರದ ಟ್ರೈಲರ್ ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಕಾಂತಾರ ಮೊದಲ ಸಿನಿಮಾದ ಟ್ರೈಲರ್ ಬಿಡುಗಡೆಯಾದಾಗ ಜನ ಭಾರೀ ಸಂಖ್ಯೆಯಲ್ಲಿ ನೋಡಿ ಇಷ್ಪಟ್ಟಿದ್ದರು. ಟ್ರೈಲರ್ ನಿಂದಲೇ ಚಿತ್ರ ನೋಡಲು ಜನರಿಗೆ ಕುತೂಹಲವಾಗಿತ್ತು. ಯಾಕೆಂದರೆ ಅದಕ್ಕೆ ಟ್ರೈಲರ್ ನಲ್ಲಿದ್ದ ಭೂತಕೋಲದ ದೃಶ್ಯ.

ಈಗ ಕಾಂತಾರ ಚಾಪ್ಟರ್ 1 ಈಗಾಗಲೇ ಬಂದಿರುವ ಕತೆಯ ಪೂರ್ವಭಾಗದ ಕತೆ ಎನ್ನಲಾಗಿದೆ. ಇಲ್ಲಿ ದೈವಗಳ ಹುಟ್ಟು, ಮನುಷ್ಯ ಮತ್ತು ದೈವದ ನಡುವಿನ ಸಂಬಂಧ ಎಲ್ಲವನ್ನೂ ಹೇಳಲಾಗಿದೆ ಎನ್ನಲಾಗಿದೆ. ಹೀಗಾಗಿ ಇಲ್ಲೂ ಭೂತಕೋಲದ ಝಲಕ್ ನೋಡಲು ಸಿಗಬಹುದೇ ಎಂದೇ ಜನರ ನಿರೀಕ್ಷೆಯಾಗಿದೆ. ಇದೆಲ್ಲದಕ್ಕೂ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ