ಅಮೆರಿಕಾಗೆ ಹೋದರೂ ಪಂಚೆ ಬಿಡದ ‘ವಿಶ್ವ ಶ್ರೇಷ್ಠ ಕನ್ನಡಿಗ’ ರಿಷಬ್ ಶೆಟ್ಟಿ

ಬುಧವಾರ, 28 ಜೂನ್ 2023 (08:50 IST)
Photo Courtesy: Twitter

ವಾಷಿಂಗ್ಟನ್: ಕಾಂತಾರ ಸ್ಟಾರ್ ರಿಷಬ್ ಶೆಟ್ಟಿಗೆ ಅಮೆರಿಕಾದ ಪ್ರತಿಷ್ಠಿತ ಪ್ಯಾರಾಮೌಂಟ್ ಥಿಯೇಟರ್ ನಲ್ಲಿ ವಿಶ್ವ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರಶಸ್ತಿ ಸ್ವೀಕರಿಸಲು ಇತ್ತೀಚೆಗೆ ರಿಷಬ್ ಮತ್ತು ಪತ್ನಿ ಪ್ರಗತಿ ಅಮೆರಿಕಾಗೆ ತೆರಳಿದ್ದರು. ಅಮೆರಿಕಾದ ಸಹ್ಯಾದ್ರಿ ಕನ್ನಡ ಸಂಘ ಮತ್ತು ವಾಷಿಂಗ್ಟನ್ ರಾಜ್ಯದ ಕನ್ನಡಿಗರಾದ ಮನು ಗೌರವ್  ಮತ್ತು ತಂಡದವರು ಪ್ರಶಸ್ತಿ ನೀಡಿ ಗೌರವಿಸಿದರು. ವಿಶೇಷವೆಂದರೆ ಈ ವೇಳೆಯೂ ರಿಷಬ್ ತಮ್ಮ ಪಂಚೆ ಸ್ಟೈಲ್ ಮಾತ್ರ ಬಿಟ್ಟಿಲ್ಲ. 

ಕಾಂತಾರ ಸಿನಿಮಾ ಬಳಿಕ ರಿಷಬ್ ಎಲ್ಲೇ ಹೋದರೂ ಪಂಚೆ ಉಟ್ಟುಕೊಂಡೇ ತೆರಳುತ್ತಾರೆ. ಅವರ ಅಭಿಮಾನಿಗಳಿಗೂ ಇದು ಇಷ್ಟ. ಅಮೆರಿಕಾದಲ್ಲಿ ನಮ್ಮ ಸಂಸ್ಕೃತಿ ಬಿಡದ ರಿಷಬ್ ಪಂಚೆ ಉಟ್ಟುಕೊಂಡೇ ಪ್ರಶಸ್ತಿ ಸ್ವೀಕರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ