ಕ್ರಿಯೇಟಿವ್ ಆಗಿ ಮಗನ ಮೊದಲ ಜನ್ಮದಿನ ಆಚರಿಸಿಕೊಂಡ ರಿಷಬ್ ಶೆಟ್ಟಿ
ಸದ್ಯಕ್ಕೆ ತವರೂರಿನಲ್ಲಿ ಬೀಡುಬಿಟ್ಟಿರುವ ರಿಷಬ್ ಪಕ್ಕಾ ಕರಾವಳಿ ಶೈಲಿಯಲ್ಲಿ ಬರ್ತ್ ಡೇ ಸೆಟ್ ಹಾಕಿ ಸಂಭ್ರಮಾಚರಿಸಿದ್ದಾರೆ. ಸುತ್ತ ಹಲಸಿನ ಹಣ್ಣು, ಎಳೆ ನೀರಿನ ಗೊಂಚಲು, ತೆಂಗಿನ ಗರಿ ಇರಿಸಿ ಬರ್ತ್ ಡೇ ಸೆಟ್ಟಪ್ ಮಾಡಿದ್ದು, ಪತ್ನಿ, ಹಾಗೂ ಕುಟುಂಬ ಸದಸ್ಯರ ಜತೆಗೂಡಿ ಬರ್ತ್ ಡೇ ಆಚರಿಸಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗಿದ್ದು, ಇನ್ನು ಮುಂದೆ ಬರ್ತ್ ಡೇ ಆಚರಿಸಿಕೊಳ‍್ಳುವವರಿಗೂ ಹೊಸ ಐಡಿಯಾ ಕೊಟ್ಟಿದೆ.