ಸಲಾರ್ ಸೆಟ್ ನಲ್ಲಿ ಪ್ರಶಾಂತ್ ನೀಲ್ ಜೊತೆ ರಿಷಬ್ ಶೆಟ್ಟಿ: ಏನಿದು ಹೊಸ ಸಮಾಚಾರ?

ಗುರುವಾರ, 17 ಆಗಸ್ಟ್ 2023 (09:10 IST)
Photo Courtesy: Twitter
ಮಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಭಾಸ್ ನಾಯಕರಾಗಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆ.

ಕಡಲತೀರ ಮಂಗಳೂರಿನ ಬಂದರಿನಲ್ಲಿ ಅಳಿದುಳಿದ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಈ ಸೆಟ್ ನಲ್ಲಿ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಇರುವ ಫೋಟೋವೊಂದು ಈಗ ವೈರಲ್ ಆಗಿದೆ.

ರಿಷಬ್ ಈಗ ಕಾಂತಾರ 2 ಪ್ರಿ ಪ್ರೊಡಕ್ಷನ್ ಕೆಲಸಗಳಿಗಾಗಿ ಮಂಗಳೂರಿನಲ್ಲಿದ್ದಾರೆ. ಇದೇ ವೇಳೆ ಪ್ರಶಾಂತ್ ನೀಲ್ ಸಲಾರ್ ಶೂಟಿಂಗ್ ನಡೆಯುತ್ತಿರುವ ಜಾಗಕ್ಕೆ ಭೇಟಿ ನೀಡಿದ್ದಾರೆ. ಇದೊಂದು ಸೌಹಾರ್ದಯುತ ಭೇಟಿ ಎಂದಾದರೂ ರಿಷಬ್ ಭೇಟಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸಲಾರ್ ಸಿನಿಮಾ ಸೆಪ್ಟೆಂಬರ್ 28 ಕ್ಕೆ ರಿಲೀಸ್ ಆಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ