ಡಿ ಬಾಸ್ ದರ್ಶನ್ ‘ರಾಬರ್ಟ್’ ಹುಡುಗಿಯ ಫಸ್ಟ್ ಲುಕ್ ಇಂದು ಲಾಂಚ್

ಶನಿವಾರ, 5 ಸೆಪ್ಟಂಬರ್ 2020 (09:31 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾದ ನಾಯಕಿ ಆಶಾ ಭಟ್ ಅವರ ಫಸ್ಟ್ ಲುಕ್ ಇಂದು ಲಾಂಚ್ ಆಗಲಿದೆ.


ಲಾಕ್ ಡೌನ್ ನಿಂದಾಗಿ ಚಿತ್ರ ಇನ್ನೂ ತೆರೆ ಕಂಡಿಲ್ಲ. ಹೀಗಾಗಿ ಚಿತ್ರತಂಡ ಆಗಾಗ ಪೋಸ್ಟರ್ ಗಳನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡುತ್ತಿದೆ. ಇದೀಗ ರಾಬರ್ಟ್ ಸಿನಿಮಾದಲ್ಲಿ ನಾಯಕ ನಟಿ ಆಶಾ ಭಟ್ ಅವರ ಲುಕ್ ಹೇಗಿರಲಿದೆ ಎಂದು ಬಹಿರಂಗಪಡಿಸಲಿದ್ದಾರೆ. ಈ ವಿಚಾರವನ್ನು ಸ್ವತಃ ನಿರ್ದೇಶಕ ತರುಣ್ ಸುಧೀರ್ ಪ್ರಕಟಿಸಿದ್ದು, ಇಂದು 10 ಗಂಟೆಗೆ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಫಸ್ಟ್ ಲುಕ್ ವೀಕ್ಷಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ