ರಾಬರ್ಟ್ ಸಿನಿಮಾದ ಜೈಶ್ರೀರಾಮ ಹೊಸ ಹಾಡು ಇಂದು ಲಾಂಚ್

ಗುರುವಾರ, 2 ಏಪ್ರಿಲ್ 2020 (09:26 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ‘ಜೈ ಶ್ರೀರಾಮ’ ಹಾಡಿನ ಹೊಸ ಅವತರಣಿಕೆ ರಾಮನವಮಿ ಪ್ರಯುಕ್ತ ಇಂದು ಬಿಡುಗಡೆಯಾಗಲಿದೆ.


ಈಗಾಗಲೇ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿತ್ತು. ಆದರೆ ಇದೀಗ ಮತ್ತೊಬ್ಬರು ಗಾಯಕರು ಹಾಡಿರುವ ಹೊಸ ಅವತರಣಿಕೆ ಬಿಡುಗಡೆ ಮಾಡಲಾಗುತ್ತಿದೆ. ಇಂದು ಬೆಳಿಗ್ಗೆ 10.5 ಕ್ಕೆ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.

ಈ ಹಾಡನ್ನು ಒಬ್ಬ ವಿಶೇಷ ಗಾಯಕನಿಂದ ಹಾಡಿಸಲಾಗಿದೆ ಎಂದು ಪ್ರೇಕ್ಷಕರಲ್ಲಿ ನಿರ್ದೇಶಕ ತರುಣ್ ಸುಧೀರ್ ಕುತೂಹಲ ಸೃಷ್ಟಿಸಿದ್ದಾರೆ. ಆ ಗಾಯಕ ಯಾರು ಎಂದು ತಿಳಿಯಬೇಕಾದರೆ ಹಾಡು ಲಾಂಚ್ ಆಗುವವರೆಗೆ ಕಾಯಲೇಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ