ಫೆಬ್ರವರಿ 28 ಕ್ಕೆ ರಾಬರ್ಟ್ ಪ್ರಿ ರಿಲೀಸ್ ಈವೆಂಟ್

ಮಂಗಳವಾರ, 23 ಫೆಬ್ರವರಿ 2021 (09:57 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ.


ಮುಂದಿನ ತಿಂಗಳು ಮಾರ್ಚ್ 11 ಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ. ಆದರೆ ಅದಕ್ಕೂ ಮೊದಲು ಫೆಬ್ರವರಿ 28 ರಂದು ಹುಬ್ಬಳ್ಳಿಯ ರೈಲ್ವೇ ಮೈದಾನದಲ್ಲಿ ಸಂಜೆ 6 ಗಂಟೆಗೆ ಪ್ರಿ ರಿಲೀಸ್ ಈವೆಂಟ್ ಆಯೋಜಿಸಿದೆ. ಸಾಮಾನ್ಯವಾಗಿ ಚಿತ್ರ ಬಿಡುಗಡೆಗೆ ಮುನ್ನ ಅಡಿಯೋ ರಿಲೀಸ್ ಸಮಾರಂಭ ಆಯೋಜಿಸಲಾಗುತ್ತಿದೆ. ಆದರೆ ರಾಬರ್ಟ್ ಪ್ರಿ ರಿಲೀಸ್ ಈವೆಂಟ್ ಎಂದು ಹೊಸ ಟ್ರೆಂಡ್ ಹುಟ್ಟು ಹಾಕುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ