ನಾನು ಆವತ್ತು ಮಾತಾಡಿದ್ದು ನಟ ದರ್ಶನ್ ಬಗ್ಗೆ ಅಲ್ಲ: ಜಗ್ಗೇಶ್ ಸ್ಪಷ್ಟನೆ

ಮಂಗಳವಾರ, 23 ಫೆಬ್ರವರಿ 2021 (09:26 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಬಗ್ಗೆ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ದರ್ಶನ್ ಅಭಿಮಾನಿಗಳು ನಿನ್ನೆ ನವರಸನಾಯಕ ಜಗ್ಗೇಶ್ ಗೆ ಮುತ್ತಿಗೆ ಹಾಕಿ ಕ್ಷಮೆ ಕೇಳಿಸಿದ್ದರು. ಈ ಘಟನೆ ಬಗ್ಗೆ ಜಗ್ಗೇಶ್ ಖಾಸಗಿ ಮಾಧ‍್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.


ನಾನು ಅಡಿಯೋ ಟೇಪ್ ನಲ್ಲಿ ಮಾತನಾಡಿದ್ದು, ನಟ ದರ್ಶನ್ ಬಗ್ಗೆ ಅಲ್ಲ. ನಮ್ಮ ಹುಡುಗ ಒಬ್ಬ ವೆಬ್ ಡಿಸೈನ್ ಮಾಡುವವನಿದ್ದಾನೆ. ಅವನಿಗೆ ನಾನ್ ವೆಜ್ ಎಂದರೆ ಭಾರೀ ಇಷ್ಟ. ಅವನ ಬಗ್ಗೆ ನಾನು ಮಾತಾಡಿದ್ದನ್ನು ಕೆಲವರು ಬೇಕೆಂದೇ ನನ್ನ ಬಗ್ಗೆ ಅಪಪ್ರಚಾರ ಮಾಡಲು ಅಡಿಯೋ ಟೇಪ್ ಎಡಿಟ್ ಮಾಡಿ ನಟ ದರ್ಶನ್ ಬಗ್ಗೆ ಮಾತನಾಡಿದ್ದ ರೀತಿ ಹರಿಯಬಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬೇಕೆಂದೇ ನಟರ ಮಧ್ಯೆ ತಂದಿಡಲು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇಂಥಹವರಿಂದಲೇ ನಮ್ಮ ಚಿತ್ರರಂಗ ಹಾಳಾಗಿರೋದು. ನಾನು ಒಬ್ಬ ಹಿರಿಯ ನಟ ಇದ್ದೇನೆ. ನನಗೆ ದರ್ಶನ್ ಬಗ್ಗೆ ಅಪಪ್ರಚಾರ ಮಾಡಿ ಏನಾಗಬೇಕಾಗಿದೆ? ಅಷ್ಟಕ್ಕೂ ದರ್ಶನ್ ನನಗೆ ಶತ್ರುವೇ? ನಾವಿಬ್ಬರೂ ಚೆನ್ನಾಗಿದ್ದೇವೆ. ಸುಮ್ನೆ ಯಾರೋ ನಮ್ಮ ಬಗ್ಗೆ ಕಿಡಿ ಹತ್ತಿಸುತ್ತಿದ್ದಾರೆ ಎಂದು ಜಗ್ಗೇಶ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ