ಕೆಜಿಎಫ್ 2 ನಲ್ಲಿ ರಾಕಿಂಗ್ ಸ್ಟಾರ್ ಯಶ್ ಲುಕ್ ಹೀಗಿರಲಿದೆ!

ಸೋಮವಾರ, 13 ಮೇ 2019 (07:13 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾದಲ್ಲೂ ಯಶ್ ದಾಡಿ ಬಿಟ್ಟುಕೊಂಡಿರುತ್ತಾರಾ? ಅಥವಾ ಅವರ ಲುಕ್ ಚೇಂಜ್ ಆಗುತ್ತಾ?


ಹೀಗೊಂದು ಕುತೂಹಲ ಅಭಿಮಾನಿಗಳಲ್ಲಿತ್ತು. ಅದಕ್ಕೀಗ ತೆರೆ ಬಿದ್ದಿದೆ. ಯಶ್ ಕೆಜಿಎಫ್ ನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಫೋಟೋ ಇದೀಗ ಲೀಕ್ ಆಗಿದ್ದು ವೈರಲ್ ಆಗಿದೆ.

ಇಲ್ಲೂ ಕೂಡಾ ಯಶ್ ಉದ್ದ ದಾಡಿ, ಕೂದಲು ಹಾಗೇ ಇರಲಿದೆ. ಕೂದಲು ಇನ್ನೂ ಹೆಚ್ಚು ಉದ್ದವಿದೆ ಎಂದರೂ ತಪ್ಪಾಗಲಾರದು. ಅಂತೂ ಲುಕ್ ನಲ್ಲಿ ಅಂತಹ ಹೆಚ್ಚಿನ ಬದಲಾವಣೆ ಏನೂ ಇರಲ್ಲ ಎನ್ನುವುದು ಲೀಕ್ ಆಗಿರುವ ಫೋಟೋದಿಂದ ಕನ್ ಫರ್ಮ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ