ಮದ್ವೆ ಆದ್ಮೇಲೆ ಆಕ್ಟಿಂಗ್ ನಿಲ್ಸಿದ್ರಾ? ಈ ಪ್ರಶ್ನೆಗೆ ಮೇಘನಾ ರಾಜ್ ಕೊಟ್ಟ ಉತ್ತರವೇನು ಗೊತ್ತಾ?
‘ಮದುವೆ ನಂತರ ನನ್ನ ಮುಂದಿನ ಸಿನಿಮಾ ಯಾವುದು ಎಂದು ಪ್ರಶ್ನೆ ಕೇಳುತ್ತಿದ್ದವರಿಗೆ ಇಲ್ಲಿದೆ ಉತ್ತರ. ನಾನು ಗೆಳೆಯ ಸೃಜನ್ ಜತೆ ಹೊಸ ಸಿನಿಮಾ (ಇನ್ನೂ ಹೆಸರಿಟ್ಟಿಲ್ಲ) ಮಾಡುತ್ತಿದ್ದೇನೆ. ಈಗಾಗಲೇ ನನ್ನ ಭಾಗದ ಚಿತ್ರೀಕರಣವೂ ಶುರುವಾಗಿದೆ’ ಎಂದು ಮೇಘನಾ ಘೋಷಿಸಿದ್ದಾರೆ.