ಯಶ್ 19 ಬಗ್ಗೆ ಮಹತ್ವದ ಸುದ್ದಿ! ಅಭಿಮಾನಿಗಳಲ್ಲಿ ಕುತೂಹಲ

ಭಾನುವಾರ, 10 ಜುಲೈ 2022 (09:40 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಯಾವುದು ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ. ಇದುವರೆಗೆ ಯಶ್ ಕಡೆಯಿಂದ ಯಾವುದೇ ಸುದ್ದಿ ಬಂದಿಲ್ಲ ಎಂದು ನಿರಾಸೆಯಲ್ಲಿದ್ದವರಿಗೆ ಈಗ ಖುಷಿ ಸುದ್ದಿ ಕಾದಿದೆ.

ರಾಕಿಂಗ್ ಸ್ಟಾರ್ ಯಶ್ 19 ನೇ ಸಿನಿಮಾ ಬಗ್ಗೆ ಎರಡು ದಿನಗಳೊಳಗಾಗಿ ಅಧಿಕೃತ ಘೋಷಣೆಯಾಗಲಿದೆ ಎಂಬ ಸುದ್ದಿ ಈಗ ಭರ್ಜರಿಯಾಗಿ ಹರಿದಾಡುತ್ತಿದೆ. ಇದು ಯಶ್ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.

ಮೂಲಗಳ ಪ್ರಕಾರ ಖ್ಯಾತ ನಿರ್ದೇಶಕರೊಬ್ಬರ ಜೊತೆಗೆ ಯಶ್ ಮುಂದಿನ ಸಿನಿಮಾ ಮಾಡಲಿದ್ದಾರೆ. ಇದೂ ಕೂಡಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿರಲಿದೆ. ನಾಳೆಯೊಳಗೆ ಟೈಟಲ್ ಅಂತಿಮವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ