ಹೈವೇ ಮಾಫಿಯಾದಲ್ಲಿ ರಾಕಿಂಗ್ ಸ್ಟಾರ್ ಯಶ್! ಕೆಜಿಎಫ್ ನಂತರ ಅದೃಷ್ಟವೇ ಬದಲಾಯ್ತು!

ಶುಕ್ರವಾರ, 18 ಜನವರಿ 2019 (16:42 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾ ಹಿಟ್ ಆದ ಮೇಲೆ ನ್ಯಾಷನಲ್ ಸ್ಟಾರ್ ಆಗಿಬಿಟ್ಟಿದ್ದಾರೆ. ಕೆಜಿಎಫ್ ನಲ್ಲಿ ಅವರ ಅಭಿನಯ ನೋಡಿ ಪರಭಾಷಿಕರು ರಾಕಿಂಗ್ ಸ್ಟಾರ್ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರೆ ಎಂಬೆಲ್ಲಾ ಸುದ್ದಿಗಳು ಹಬ್ಬಿದ್ದವು. ಅದೀಗ ನಿಜವಾಗುವ ಲಕ್ಷಣ ಕಾಣುತ್ತಿದೆ.


ರಾಕಿಂಗ್ ಸ್ಟಾರ್ ಯಶ್ ಬಹುಭಾಷಾ ಸಿನಿಮಾವೊಂದರಲ್ಲಿ ನಟಿಸುವ ಸುದ್ದಿ ಬಂದಿದೆ.  ಸುಚಿತ್ರಾ ರಾವ್ ಬರೆದಿರುವ ‘ದಿ ಹೈವೇ ಮಾಫಿಯಾ’ ಎನ್ನುವ ಕಾದಂಬರಿ ಇದೀಗ ಸಿನಿಮಾವಾಗಲಿದ್ದು, ಆ ಸಿನಿಮಾ ಬೇರೆ ಬೇರೆ ಭಾಷೆಗಳಲ್ಲಿ ಮೂಡಿಬರಲಿದೆ.

 ಈ ಪೈಕಿ ಕನ್ನಡ ಅವತರಣಿಕೆಯಲ್ಲಿ ರಾಕಿಂಗ್ ಸ್ಟಾರ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ಯಶ್ ಕಡೆಯಿಂದ ಈ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲ. ಮೂಲಗಳ ಪ್ರಕಾರ ತಮಿಳಿನಲ್ಲಿ ವಿಜಯ್, ತೆಲುಗಿನಲ್ಲಿ ಮಹೇಶ್ ಬಾಬು, ಹಿಂದಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಲೀಡ್ ಪಾತ್ರ ಮಾಡಲಿದ್ದು, ಕನ್ನಡದಲ್ಲಿ ಯಶ್ ಹೆಸರು ಕೇಳಿಬರುತ್ತಿದೆಯಂತೆ. ಇದು ಗೋ ಕಳ್ಳ ಸಾಗಣಿಕೆ ಕುರಿತಾದ ಕತೆಯಾಗಿದೆ ಎನ್ನಲಾಗಿದೆ. ಆದರೆ ಎಲ್ಲಕ್ಕಿಂತ ಮೊದಲು ಕೆಜಿಎಫ್ ಚಾಪ್ಟರ್ 2 ಬರಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ