ಯಶ್ 19 ನೇ ಸಿನಿಮಾಗೆ ಈ ಸ್ಟಾರ್ ನಿರ್ದೇಶಕನ ಆಕ್ಷನ್ ಕಟ್?
ಯಶ್ 19 ನೇ ಸಿನಿಮಾಗೆ ಸೂಪರ್ ಸ್ಟಾರ್ ರಜನೀಕಾಂತ್ ಗೆ ಆಕ್ಷನ್ ಕಟ್ ಹೇಳಿದ್ದ ಸ್ಟಾರ್ ನಿರ್ದೇಶಕ ಶಂಕರ್ ನಿರ್ದೇಶನವಿರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸಿನಿಮಾ 800 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾಗಲಿದೆ ಎನ್ನಲಾಗುತ್ತಿದೆ.
ಕೆಜಿಎಫ್ 2 ಬಳಿಕ ಯಶ್ ಮಾರುಕಟ್ಟೆ ದೊಡ್ಡದಾಗಿದೆ. ಸ್ವತಃ ಅವರ ಸಂಭಾವನೆಯೇ 100 ಕೋಟಿ ರೂ.ಗೆ ಬಂದು ನಿಂತಿದೆ ಎನ್ನಲಾಗುತ್ತಿದೆ. ಹೀಗಾಗಿ ಮುಂದಿನ ಸಿನಿಮಾವೂ ಅಷ್ಟೇ ಭರ್ಜರಿಯಾಗಿ ಸೆಟ್ಟೇರುವುದು ಖಂಡಿತಾ.