ಪ್ರಭಾಸ್ ಜೊತೆಗೆ ಈ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಾರಾ ರಾಕಿ ಭಾಯಿ ಯಶ್?
ಈ ನಡುವೆ ರಾಕಿ ಭಾಯಿ ಯಶ್ ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಭಾಸ್ ನಾಯಕರಾಗಿರುವ ಸಲಾರ್ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ.
ಹೊಂಬಾಳೆ ಫಿಲಂಸ್ ಜೊತೆಗೆ ಯಶ್ ಗೆ ಉತ್ತಮ ಬಾಂಧವ್ಯವಿದೆ. ಅಲ್ಲದೆ, ಪ್ರಭಾಸ್ ಜೊತೆಗೂ ಸ್ನೇಹ ಸಂಬಂಧವಿದೆ. ಇದೀಗ ಸಲಾರ್ ಗೆ ಮತ್ತಷ್ಟು ಜನಪ್ರಿಯತೆ ತಂದುಕೊಡುವ ಉದ್ದೇಶದಿಂದ ವಿಶೇಷ ಪಾತ್ರದಲ್ಲಿ ಯಶ್ ರನ್ನು ಕರೆತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ ಎನ್ನಲಾಗಿದೆ.