ಮಗಳು ಐರಾ ಜೊತೆ ಯಶ್ ತುಂಟಾಟದ ವಿಡಿಯೋ ವೈರಲ್

ಮಂಗಳವಾರ, 27 ಸೆಪ್ಟಂಬರ್ 2022 (09:10 IST)
ಬೆಂಗಳೂರು: ಕೆಜಿಎಫ್ 2 ಬಳಿಕ ಯಾವುದೇ ಸಿನಿಮಾ ಘೋಷಣೆ ಮಾಡದೇ ಕುಟುಂಬದ ಜೊತೆ ಕಾಲ ಕಳೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ಈಗ ಮಗಳು ಐರಾ ಜೊತೆ ತುಂಟಾಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಮಗಳ ದಿನಕ್ಕೆ ಐರಾ ಜೊತೆಗಿನ ವಿಡಿಯೋ ಪ್ರಕಟಿಸಿರುವ ಯಶ್ ಮಗಳಿಗೆ ಶುಭ ಹಾರೈಸಿದ್ದಾರೆ. ‘ನಿನ್ನ ರೂಪದಲ್ಲಿ ಒಬ್ಬ ದೇವತೆ ಇದ್ದಾಳೆ. ಆ ದೇವತೆಯೇ ನೀನು’ ಎಂದು ಯಶ್ ಬರೆದುಕೊಂಡಿದ್ದಾರೆ.

ಮೊನ್ನೆಯಷ್ಟೇ ರಾಧಿಕಾ ಮಗಳ ದಿನಕ್ಕೆ ಐರಾ ಜೊತೆಗಿನ ಫೋಟೋವೊಂದನ್ನು ಪ್ರಕಟಿಸಿ ಶುಭ ಹಾರೈಸಿದ್ದರು. ಇದೀಗ ಯಶ್ ಮಗಳ ಜೊತೆ ಆಟವಾಡುವ ವಿಡಿಯೋ ಪ್ರಕಟಿಸಿ ಶುಭ ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ