ಕಾಂತಾರ ಚಾಪ್ಟರ್ 1 ಸಿನಿಮಾ ಕತೆಯೇನು ರಿವೀಲ್ ಆಯ್ತು ಆ ವಿಚಾರ

Krishnaveni K

ಸೋಮವಾರ, 15 ಸೆಪ್ಟಂಬರ್ 2025 (09:59 IST)
ಬೆಂಗಳೂರು: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾ ತೆರೆಗೆ ಬರಲು ಇನ್ನು ಕೆಲವೇ ದಿನಗಳು ಬಾಕಿಯಿದೆ. ಇದಕ್ಕೂ ಮುನ್ನ ಕಾಂತಾರ ಚಾಪ್ಟರ್ 1 ಸಿನಿಮಾದ ಕತೆಯೇನು ಎಂಬುದು ರಿವೀಲ್ ಆಗಿದೆ.

ಕಾಂತಾರ ಚಾಪ್ಟರ್ 1 ಸಿನಿಮಾ ಈಗಾಗಲೇ ಬಿಡುಗಡೆಯಾಗಿರುವ ಕಾಂತಾರ ಸಿನಿಮಾದ ಹಿಂದಿನ ಕತೆ ಎಂದು ಈಗಾಗಲೇ ರಿಷಬ್ ಶೆಟ್ಟಿ ಖಚಿತಪಡಿಸಿದ್ದಾರೆ. ಇದೀಗ ಕಾಂತಾರ ಚಾಪ್ಟರ್ 1 ರಲ್ಲಿ ಯಾವ ಕತೆ ಹೇಳಲಾಗಿದೆ ಎಂದು ಸುಳಿವೊಂದು ಸಿಕ್ಕಿದೆ.

ಕಾಂತಾರ ಚಾಪ್ಟರ್ 1 ರಲ್ಲಿ ಕದಂಬರ ಕಾಲದ ಕತೆ ಹೇಳಲಾಗಿದೆ. ಈ ಸಿನಿಮಾದಲ್ಲಿ ಮುಖ್ಯ ಪಾತ್ರಧಾರಿ ನಾಗ ಸಾಧುವಿನ ಛಾಯೆಯುಳ್ಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಬನವಾಸಿಯ ದಟ್ಟ ಅರಣ್ಯದಲ್ಲಿ ನಡೆಯುವ ಕತೆ ಇದಾಗಿದೆ ಎಂದು ಹೇಳಾಗಿದೆ. ಇದರಲ್ಲಿ ದೈವಗಳ ಹುಟ್ಟು, ದೈವಗಳು ಮತ್ತು ಮನುಷ್ಯರ ನಡುವಿನ ಸಂಬಂಧದ ಬಗ್ಗೆ ಹೇಳಲಾಗಿದೆಯಂತೆ. ಸಿನಿಮಾದ ಅವಧಿ ಒಟ್ಟು 2.45 ನಿಮಿಷಗಳಷ್ಟಿದೆಯಂತೆ. ಹೀಗೆಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದ್ದು ಚಿತ್ರದ ಬಗ್ಗೆ ಜನರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ