ರಾಕಿ ಭಾಯ್ ಯಶ್-ಸಂಜು ಬಾಬ ರಾಮೋಜಿರಾವ್ ಫಿಲಂ ಸಿಟಿಯಲ್ಲಿ ಫೈಟ್

ಶನಿವಾರ, 28 ನವೆಂಬರ್ 2020 (09:42 IST)
ಬೆಂಗಳೂರು: ಕೆಜಿಎಫ್ 2 ಚಿತ್ರದ ಫೈನಲ್ ಶೂಟಿಂಗ್ ಗಾಗಿ ಹೈದರಾಬಾದ್ ನಲ್ಲಿ ಚಿತ್ರತಂಡ ಬೀಡುಬಿಟ್ಟಿದೆ. ರಾಕಿಂಗ್ ಸ್ಟಾರ್ ಯಶ್ ಈಗಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.


ಇನ್ನು ಚಿತ್ರದಲ್ಲಿ ಅಧೀರ ಪಾತ್ರ ಮಾಡುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಕೂಡಾ ಮುಂದಿನ ವಾರ ಚಿತ್ರತಂಡವನ್ನು ಕೂಡಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ ಸಂಜಯ್ ದತ್ ಮತ್ತು ರಾಕಿ ಭಾಯ್ ನಡುವಿನ ಜಿದ್ದಾಜಿದ್ದಿನ ಫೈಟಿಂಗ್ ದೃಶ್ಯದ ಚಿತ್ರೀಕರಣ ಬಾಕಿಯಿದ್ದು, ಇದು ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಚಿತ್ರೀಕರಣವಾಗಲಿದೆ. ಸಂಜಯ್ ದತ್ ಕೂಡಾ ಈಗಾಗಲೇ ಹೈದರಾಬಾದ್ ಗೆ ಬಂದಿಳಿದಿದ್ದಾರೆ. ಡಿಸೆಂಬರ್ ಮಧ್ಯಾವಧಿಯಲ್ಲಿ ಕೆಜಿಎಫ್ 2 ಚಿತ್ರೀಕರಣ ಪೂರ್ತಿಯಾಗುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ