ರಕ್ಷಿತ್ ಶೆಟ್ಟಿ ನಾಯಕಿ ಈಗ ಶಿವರಾಜ್ ಕುಮಾರ್ ಗೂ ಹೀರೋಯಿನ್

ಸೋಮವಾರ, 5 ಜೂನ್ 2023 (09:00 IST)
Photo Courtesy: Twitter
ಬೆಂಗಳೂರು: ರಕ್ಷಿತ್ ಶೆಟ್ಟಿ ಜೊತೆ ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಮಾಡಿರುವ ನಟಿ ರುಕ್ಮಿಣಿ ವಸಂತ್ ಈಗ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಇನ್ನೂ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದೆ. ಆಗಲೇ ರುಕ್ಮಿಣಿಗೆ ಅದೃಷ್ಟ ಖುಲಾಯಿಸಿದೆ. ಶಿವರಾಜ್ ಕುಮಾರ್ ನಾಯಕರಾಗಿರುವ ಭೈರತಿ ರಣಗಲ್ ಸಿನಿಮಾಗೆ ರುಕ್ಮಿಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಈ ಸಿನಿಮಾ ಶಿವಣ್ಣ ಹೋಂ ಪ್ರೊಡಕ್ಷನ್ ಗೀತಾ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ. ನರ್ತನ್ ನಿರ್ದೇಶಕರು. ಇತ್ತೀಚೆಗೆ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆದಿತ್ತು. ಇದೀಗ ಸಿನಿಮಾ ತಂಡ ನಾಯಕಿಯ ಘೋಷಣೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ