ಕೆಡಿ ಹೀರೋಯಿನ್ ಶಿಲ್ಪಾ ಶೆಟ್ಟಿಗೆ ಕನ್ನಡ, ತೆಲುಗು ನಡುವೆ ವ್ಯತ್ಯಾಸ ಗೊತ್ತಿಲ್ವಾ?!

ಗುರುವಾರ, 23 ಮಾರ್ಚ್ 2023 (09:40 IST)
Photo Courtesy: Twitter
ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ನಾಯಕರಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ’ಗೆ ಶಿಲ್ಪಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ.

ಈ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ಸತ್ಯವತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿಲ್ಪಾ ಫಸ್ಟ್ ಲುಕ್ ಪೋಸ್ಟರ್ ನಿನ್ನೆ ಯುಗಾದಿ ಹಬ್ಬದ ನಿಮಿತ್ತ ರಿಲೀಸ್ ಆಗಿತ್ತು.

ಈ ಪೋಸ್ಟರ್ ನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಶಿಲ್ಪಾ ತೆಲುಗಿನಲ್ಲಿ ಯುಗಾದಿ ಹಬ್ಬಕ್ಕೆ ಶುಭ ಕೋರಿದ್ದಾರೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮೇಡಂ ನೀವು ನಟಿಸುತ್ತಿರುವುದು ಕನ್ನಡ ಸಿನಿಮಾದಲ್ಲಿ. ಕನ್ನಡದಲ್ಲಿ ವಿಶ್ ಮಾಡುವ ಬದಲು ತೆಲುಗಿನಲ್ಲಿ ವಿಶ್ ಮಾಡಿದ್ದೀರಲ್ಲಾ? ಕನ್ನಡ, ತೆಲುಗು ನಡುವೆ ವ್ಯತ್ಯಾಸವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ