ಯುಗಾದಿ ದಿನವೇ ಕಾಂತಾರ 2 ಬಗ್ಗೆ ಗುಡ್ ನ್ಯೂಸ್

ಬುಧವಾರ, 22 ಮಾರ್ಚ್ 2023 (17:06 IST)
ಬೆಂಗಳೂರು: ಯುಗಾದಿಯ ಶುಭ ದಿನದಂದೇ ಕಾಂತಾರ ಸಿನಿಮಾ ತಂಡ ಎರಡನೇ ಭಾಗದ ಬಗ್ಗೆ ಗುಡ್ ನ್ಯೂಸ್ ಕೊಟ್ಟಿದೆ.

ಕಾಂತಾರ 1 ಭಾರೀ ಸಕ್ಸಸ್ ಆಗಿತ್ತು. ಇದೀಗ ಸ್ಪ್ಯಾನಿಶ್ ಮತ್ತು ಇಟಾಲಿಯನ್ ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ. ಇದರ ಬೆನ್ನಲ್ಲೇ ನಿರ್ದೇಶಕ, ನಟ ರಿಷಬ್ ಶೆಟ್ಟಿ ಕಾಂತಾರ 2 ಬಗ್ಗೆ ಅಪ್ ಡೇಟ್ ಕೊಟ್ಟಿದ್ದಾರೆ.

ಯುಗಾದಿ ಹಬ್ಬಕ್ಕೆ ಶುಭಾಶಯ ಕೋರುವ ಜೊತೆಗೆ ಕಾಂತಾರ 2 ಬರವಣಿಗೆ ಪ್ರಾರಂಭವಾಗಿದೆ ಎಂದಿದ್ದಾರೆ. ಇಷ್ಟು ದಿನ ರಿಷಬ್ ಶೆಟ್ಟಿ ಕಾಡು ಮೇಡು ಸುತ್ತಿ, ಹಲವು ತಜ್ಞರನ್ನು ಭೇಟಿ ಮಾಡಿ ತಮ್ಮ ಕತೆಗೆ ಸರಕು ರೆಡಿ ಮಾಡುತ್ತಿದ್ದಾರೆ. ಇದೀಗ ಯುಗಾದಿಯ ಶುಭ ಮುಹೂರ್ತದಲ್ಲೇ ಕತೆ ಬರೆಯಲು ಪ್ರಾರಂಭಿಸಿರುವುದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ